STORYMIRROR

Shyla Shree C

Romance

1  

Shyla Shree C

Romance

ಒಲವ ಸಿಂಚನ

ಒಲವ ಸಿಂಚನ

1 min
45

ನಿನ್ನೊಲವ ಮೃದು ಸಿಂಚನ

ಎಲ್ಲಾ ಭಾವಗಳ ಸಮ್ಮಿಲನ

ಮಮತೆಯ ದಿವ್ಯ ಸ್ಪಂದನ

ಬಿಡಿಸಲಾಗದ ಈ ಬಂಧನ


ಹಣೆಯಲಿ ಚಂದ್ರ ಚಂದನ

ಸೆಳೆಯುವ ಬೆಕ್ಕಿನ ನಯನ

ಗುನುಗುವ ಒಲವ ರಿಂಗಣ

ನೀನೇ ನನ್ನ ಬಾಳ ಚೇತನ


ಉರುಳುತಿದೆ ಬಹಳ ದಿನ

ಪರಿತಪಿಸುತಿದೆ ನನ್ನ ಮನ

ಕೈಗೊಳ್ಳುವೆ ಇಂದೆ ಯಾನ

ವಿಹರಿಸಲು ಇಡೀ ಜೀವನ


ಕಾಯುತಲಿದೆ ನನ್ನ ಭವನ

ಆಗಲಿ ಇನ್ನು ನಿನ್ನಾಗಮನ

ಬಿಡದಂತಿರುವ ಅನುದಿನ

ಆಯಿತು ಬದುಕು ಪಾವನ


ನೋಡತಲಿ ವಿಶಾಲ ಗಗನ

ಸಲ್ಲಿಸುವ ರವಿಯ ನಮನ

ಅರ್ಪಿಸುವ ದೇವಗೆ ದವನ

ನಡೆಯಲಿ ಹೋಮಹವನ


Rate this content
Log in

Similar kannada poem from Romance