STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ನನ್ನ ಸರದಾರ!!!

ನನ್ನ ಸರದಾರ!!!

1 min
319

ಅಂತಂತವನಲ್ಲ ನನ್ನ ಸರದಾರ! 

ಬಲು ಖಡಕ್ ಜಮಾದಾರ! 

ಕೈ ಹಿಡಿದಾಗ ಗಟ್ಟಿ ಮುಟ್ಟೆನಿಸುವವ

ಕೈ ಬಿಟ್ಟಾಗ, ಮುಟ್ಟಿ ನೋಡಿಕೋ ಎನ್ನುವವ


ಅಂತಂತವನಲ್ಲ ನನ್ನ ಸರದಾರ!

 

ಸೊಗಸುಗಾರ ನನ್ನ ಸರದಾರ

ಮೋಜಿನಲಿ ಹಗಲುಗನಸು ಕಾಣಿಸುವವ

ಸೋಜಿಗದ ತರುಣನವ, ಶೋಕಿಯವ

ಕುಲುಕುಲು ನಗಿಸುವವ ನನ್ನವ


ಅಂತಂತವನಲ್ಲ ನನ್ನ ಸರದಾರ!

 

ಎಂತವರ ಮನಸನೂ ಗೆಲ್ಲುವವ

ನಿಂತಲ್ಲೇ ಮೈಮನ ಸೆಳೆಯುವವ

ಕುಂತಲ್ಲೇ ಅಂತರಂಗವ ಭೇದಿಸುವವ

ಕುಂತಲ್ಲೇ ಒಲವ ಸುಖ ಬಯಸುವವ


ಅಂತತವನಲ್ಲ ನನ್ನ ಸರದಾರ..!! 



Rate this content
Log in

Similar kannada poem from Romance