STORYMIRROR

Revati Patil

Classics Inspirational Children

3  

Revati Patil

Classics Inspirational Children

ನನ್ನ ಶಾಲೆ

ನನ್ನ ಶಾಲೆ

1 min
369

ನನ್ನ ಶಾಲೆಯಿದು ನನ್ನದು 

ಎಂದೂ ಮಾಸದ ನೆನಪದು 

ಈಗ ಹೋಗಲಿಕ್ಕಾಗದು 

ಶಾಲಾ ನೆನಪುಗಳು ನನ್ನ ಬಿಟ್ಟು ಸಾಗದು 


ನನ್ನ ಶಾಲೆಯದು ನನ್ನದು 

ಹೊಸತನವನ್ನೇ ಕಲಿಸಿತದು 

ಭವಿಷ್ಯಕ್ಕೆ ಮೆರುಗು ನೀಡಿತದು 

ಜೀವನಕ್ಕೆ ಭದ್ರ ಬುನಾದಿಯದು. 


ನನ್ನ ಶಾಲೆಯಿದು ನನ್ನದು 

ಕಿವಿ ಹಿಡಿದು, ಬಗ್ಗಿ ನಿಂತದ್ದು, 

ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆದದ್ದು 

ನಕಲು ಮಾಡಿ, ಸಿಕ್ಕಿ ಬಿದ್ದದ್ದು 


ಸುಮ್ಮ ಸುಮ್ಮನೇ ಹೊಟ್ಟೆ ನೋವು ಬಂದಿದ್ದು 

ಚೆನ್ನಾಗಿರುವ ಅಜ್ಜಿಗೆ ಹುಷಾರಿಲ್ಲವೆಂದಿದ್ದು 

ಎಲ್ಲ ಕೊಟ್ಟಿರುವೆ ನೀನು ನನಗಿಂದು 


ಈಗಿನ ಪ್ರೈವೇಟ್ ಶಾಲೆಯ ಭರಾಟೆಯಲ್ಲಿ 

ನೀನು ದೇವಾಲಯವೇ ಆಗಿರುವೆ 

ಸದಾ ನನ್ನ ಮನದಲ್ಲಿ. 

ನನ್ನ ಶಾಲೆಯಿದು ನನ್ನದು


இந்த உள்ளடக்கத்தை மதிப்பிடவும்
உள்நுழை

Similar kannada poem from Classics