ನನಗಾಗಿ ನಾನು
ನನಗಾಗಿ ನಾನು
ಕೇಳಿರಲಿಲ್ಲ ನಾನು,ನನಗೆ 'ಹುಟ್ಟು' ಬೇಕೆಂದು,
'ಹುಟ್ಟು' ಎನ್ನುವುದು ಕೇಳದೆಯೇ ಸಿಕ್ಕ ವರ,
ಅದಕ್ಕಾಗಿಯಾದರೂ ಬದುಕ ಬೇಕಿದೆ,
ನನಗಾಗಿ ನಾನು |
ತಂದೆ ತಾಯಿಗಳು ನೀಡಿದ ಭೀಕ್ಷೆ ಈ 'ಹುಟ್ಟು',
ಅದುವೇ ಆರಂಭ ಉತ್ಸಾಹದ ಬದುಕಿಗೆ,
ಅದಕ್ಕಾಗಿಯಾದರೂ ಬದುಕ ಬೇಕಿದೆ,
ನನಗಾಗಿ ನಾನು |
ನನಗೆ ಪ್ರೇರಣೆ ನಾನು,ನನಗೆ ಸ್ಫೂರ್ತಿ ನಾನು,
ಸಾಧನೆಗಾಗಿ ಕ್ರಮಿಸುತ್ತಿರುವ ದಾರಿ ತುಂಬಾ ಇದೆ,
ಅದಕ್ಕಾಗಿಯಾದರೂ ಬದುಕ ಬೇಕಿದೆ,
ನನಗಾಗಿ ನಾನು |
