ನಕಲಿ ಖಾತೆಗಳ ನಡುವಲ್ಲಿ
ನಕಲಿ ಖಾತೆಗಳ ನಡುವಲ್ಲಿ
ಅಸಲಿ ಖಾತೆಗಳ ಸಾಮ್ರಾಜ್ಯದಲ್ಲಿ
ನಕಲಿ ಖಾತೆಗಳ ದರ್ಬಾರು ಹೆಚ್ಚಾಗಿವೆ.
ಇವರು ಅಸಲಿಯೋ ನಕಲಿಯೋ ಎಂದು
ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ..!!
ಪರಿಣಾಮವಾಗಿ ಗೊತ್ತಿರುವವರನ್ನು
ಶಂಕಿಸುವ ಮನಸ್ಥಿತಿ ಎದುರಾಗಿದೆ.
ಯಾವುದು ಸತ್ಯ, ಯಾವುದು ಮಿಥ್ಯ
ಎಂಬುದೇ ಗೊಂದಲದ ಗೂಡಾಗಿದೆ..?!
ಕೃತಕತೆ ತುಂಬಿದ ಜೀವನದಲ್ಲಿ
ನಕಲಿ ಖಾತೆಗಳ ನಡುವಲ್ಲಿ,
ಹೆಣ್ಣು-ಗಂಡು, ಪ್ರಾಣಿ -ಪಕ್ಷಿ
ಎಲ್ಲರೂ ಅದಲು ಬದಲಾಗಿದ್ದಾರೆ..!!
ಯಾವುದು ನಿಜ, ಯಾವುದು ಸುಳ್ಳು
ಎಂದು ಪ್ರಮಾಣಿಸಿ ನೋಡುವ ಸ್ಥಿತಿ
ಕ್ಷಣಕ್ಷಣಕ್ಕೂ ಎದುರಾಗಿ, ಎಲ್ಲರಿಗೂ
ಅಯೋಮಯ ಸ್ಥಿತಿ ಬಂದೆರಗಿದೆ..?!
ಕಲ್ಪನಾ ಲೋಕದಲ್ಲಿ ಲೈಕು ಕಮೆಂಟುಗಳ
ನಾಡಲ್ಲಿ ವಿಹರಿಸುವ ಬದಲು,
ವಾಸ್ತವದ ಬದುಕಿಗಿಳಿದು ನಿಜವಾದ
ಗೆಳೆತನಕ್ಕೆ ಬೆಲೆ ಕೊಡಬೇಕಿದೆ..!!
