STORYMIRROR

manjula g s

Abstract Inspirational Others

4  

manjula g s

Abstract Inspirational Others

ನಿನ್ನೊಲವು.....!

ನಿನ್ನೊಲವು.....!

1 min
222


ನಿನ್ನೊಲವು.....!

ಸಾಗರಕೆ ಸಂಬಂಧಿಸಿದ ಜೀವರಾಶಿಗಳಂತೆ

ನಿನಗೆ ಸಂಬಂಧಿಸಿದ ನನ್ನ ಮೇಲೆ

ನಿನ್ನೊಲವ ಒಂದು ಸ್ವಾತಿ ಮಳೆ ಸುರಿಸು,

ಹೇ ಪ್ರಭುವೇ......

ಚಿಪ್ಪಿನೊಳಗಿನ ಮುತ್ತಾಗಿ ಸಾಂದ್ರಿಕರಿಸಿ

ಲೋಕದಿ ಒಮ್ಮೆ ಹೊರಬರುವೆ,

ಬಾಳಿಗೊಂದು ಅರ್ಥ ಪಡೆವೆ.

ಇಳೆಗೆ ಸಂಬಂಧಿಸಿದ ಬೆಳೆಗಳಂತೆ

ನಿನಗೆ ಸಂಬಂಧಿಸಿದ ನನ್ನ ಮೇಲೆ

ನಿನ್ನೊಲವ ಒಂದು ಜೀವಕಣವ ಸೇರಿಸು,

ಹೇ ಪ್ರಭುವೇ.....

ಸಾರಹೀರಿ ಚೈತನ್ಯವ ಪಡೆದು

ಜೀವಸಂಕುಲಕೆ ಆಹಾರವಾಗಿ ಬೆಳೆವೆ,

ಬಾಳಿಗೊಂದು ಅರ್ಥ ಪಡೆವೆ.

ಕತ್ತಲಿಗೆ ಸಂಬಂಧಿಸಿದ ಬೆಳಕಿನಂತೆ

ನಿನಗೆ ಸಂಬಂಧಿಸಿದ ನನ್ನ ಮೇಲೆ

ನಿನ್ನೊಲವ ಒಂದು ಇಂಧನವ ತುಂಬು,

ಹೇ ಪ್ರಭುವೇ.....

ಮಿಣುಕು ಹುಳುವಿನಂತಾದರೂ

ಜಗದಿ ಒಮ್ಮೆ ಮಿನುಗಿ ಬಿಡುವೆ

ಬಾಳಿಗೊಂದು ಅರ್ಥ ಪಡೆವೆ.

ಜ್ವಾಲೆಗೆ ಸಂಬಂಧಿಸಿದ ಬೆಂಕಿಯುಂಡೆಗಳಂತೆ

ನಿನಗೆ ಸಂಬಂಧಿಸಿದ ನನ್ನ ಮೇಲೆ

ನಿನ್ನೊಲವ ಒಂದು ಗಾಳಿಯ ಬೀಸು,

ಹೇ ಪ್ರಭುವೇ.....

ಬೂದಿ ಸರಿಸಿ ನಿಗಿಕೆಂಡ ಶಾಖವಾಗಿ

ದಹನ ಯಜ್ಞ ಪೂರ್ಣಗೊಳಿಸುವೆ

ಬಾಳಿಗೊಂದು ಅರ್ಥ ಪಡೆವೆ.

ಭಾವನೆಗೆ ಸಂಬಂಧಿಸಿದ ನಾನಾ ಭಾಷೆಗಳಂತೆ ನಿನಗೆ ಸಂಬಂಧಿಸಿದ ನನ್ನ ಮೇಲೆ

ನಿನ್ನ ನಾಮದ ಒಂದು ಪದವ ಬಿತ್ತು,

ಹೇ ಪ್ರಭುವೇ......

ಜಪ ಮಂತ್ರದಂತೆ ಸ್ಮರಣೆ ಮಾಡುತಾ

ಜನ್ಮಾಂತರದ ಪಾಪ ಕಳೆವೆ

ಬಾಳಿಗೊಂದು ಸಾರ್ಥಕ ಮುಕ್ತಿ ಪಡೆವೆ.


Rate this content
Log in

Similar kannada poem from Abstract