STORYMIRROR

Lakumikanda Mukunda

Romance

2  

Lakumikanda Mukunda

Romance

ನೀನೊಂತರಾ ಮಾಯಗಾತಿ..

ನೀನೊಂತರಾ ಮಾಯಗಾತಿ..

1 min
129

ಏ ಹುಡ್ಗಿ ಎದ್ಯಾಗ ಬಂದು ಕುಂತಿಯಲ್ಲ

ನನ್ನ ಅಪ್ಪಣೆ ನೀ ಯಾಕ ಕೇಳಲಿಲ್ಲ

ಖರೇನ..ನೀನೊಂತರಾ ಮಾಯಗಾತಿ.!


ಮನಸ್ನ್ಯಾಗ ಕನಸ್ನ್ಯಾಗ ಎಷ್ಟ ಕಾಡತಿ

ಮುದ್ಮಾಡಿ ಮತ್ತ ನಕ್ಕು ಮರೆಯಾಗ್ತಿ

ಖರೇನ..ನೀನೊಂತರಾ ಮಾಯಗಾತಿ.!


ಪುಸ್ತಕ ಹಿಡದಾಗೆಲ್ಲ ಮಸ್ತಕಕ್ಕ ಕೈಹಾಕ್ತಿ

ಗಣಕದಂಗ ಮಾಹಿತಿ ಹರವಿಡತಿ

ಖರೇನ..ನೀನೊಂತರಾ ಮಾಯಗಾತಿ.!


ಯಾವ ಜನ್ಮದ ಋಣಾನುಬಂಧ ನಮ್ದು

ಹುಟ್ಕೊಂಡದ ಒಲವಿನ ಸಂಬಂಧ

ಖರೇನ..ನೀನೊಂತರಾ ಮಾಯಗಾತಿ.!


Rate this content
Log in

Similar kannada poem from Romance