ನೇರ ಮಾತೆಂಬ ಸವಿ
ನೇರ ಮಾತೆಂಬ ಸವಿ
ನೇರ ಮಾತನಾಡುವವರೆ
ನಿಜವಾದ ಒಳ್ಳೆಯವರು
ಅವರ ಮನದಿ ಎಂದಿಗೂ
ಅನೃತಕ್ಕೆ ಸ್ಥಾನವಿರುವುದಿಲ್ಲ
ನೇರ ಮಾತನಾಡುವವರೆ
ನಿಜಕ್ಕೆ ಸಮೀಪದಲ್ಲಿರುವವರು
ಅವರ ಮನದಿ ಎಂದಿಗೂ
ಅಘವಿರುವುದಿಲ್ಲ
ನೇರ ಮಾತನಾಡುವವರೆ
ನಿರಂಜನರು, ಶುದ್ಧ ಮನಸುಳ್ಳವರು
ಅವರ ಮನದಿ ಎಂದಿಗೂ
ಕಲ್ಮಷವಿರುವುದಿಲ್ಲ
ನೇರ ಮಾತನಾಡುವವರೆ
ನಿಸ್ಪೃಹ, ನಿಷ್ಕಪಟ ವ್ಯಕ್ತಿತ್ವವುಳ್ಳವರು
ಅವರ ಮನದಿ ಎಂದಿಗೂ
ವ್ಯಂಗ್ಯವಿರುವುದಿಲ್ಲ
ನೇರ ಮಾತನಾಡುವವರೆ
ಧೈರ್ಯವಂತರು, ಧೀರರು
ಅವರ ಮನದಿ ಎಂದಿಗೂ
ಭಯವಿರುವುದಿಲ್ಲ
ಸತ್ಯದ ಹಾದಿಯಲಿ
ನಡೆಯುವವರು
ನೇರಮಾತನಾಡುವರು
