ನಾಡು ನುಡಿ
ನಾಡು ನುಡಿ
ಅರಚಿ ಅರಚಿ ನಾಯಿ ಗಳಂತೆ
ಪರಚಿ ಕೊಳಚೆ ಎರಚಿ ಪಶು ಗಳಂತೆ
ಅವರ ಮೇಲೆ ಇವರು ಇವರ ಮೇಲೆ ಅವರು
ಕೊಳಕು ಮಾತಿನ ಹರಕು ಪದಗಳು
ಕನ್ನಡ ನಾಡು ನುಡಿಯ ಕಡೆ ಗಮನವಿಲ್ಲ
ಪುಂಡು ಪೋಕರಿಗಳ ಅಟ್ಟ ಹಾಸವ ಎಲ್ಲಾ
ದಾಳ ಹಾಕಿ ಪಗಡೆ ಆಡ ಹೊರಟರು
ನಾಡ ದೇವಿಯ ಕರುಳ ಹಿಂಡಿದರು
ಕನ್ನಡ ಮಣ್ಣಿನ ಮಕ್ಕಳು ಸುಮ್ಮನಿರರು
ಕೆಚ್ಚೆದೆಯ ಕಂಚಿನ ಕಂಠ ಮೊಳಗಿದೆ
ಜೀವ ತೆತ್ತು ನಾಡ ನುಡಿಯ ಉಳಿಸಬೇಕಿದೆ
ಒಗ್ಗೂಡಲಿ ಒಕ್ಕೊರಳಲಿ ಜೈ ಕನ್ನಡಾಂಬೆ
ಬಿಸಿರಕ್ತದ ಹಸುಕೂಸುಗಳ ವಿಜಯದ ಮಾಲೆ
ನಮ್ಮದೇ ನಮ್ಮದೇ ಕರ್ನಾಟಕ ನಮ್ಮದೇ
ಪ್ರತಿಯೊಂದು ಊರು ಕೇರಿ ನಮ್ಮದೇ
ತೊಲಗಿ ತೊಲಗಿ ನಾಡ ದ್ರೋಹಿಗಳೇ
ಕೆಣಕ ಬೇಡಿ ಕನ್ನಡಿಗರ ನೀವೆಂದು
ಸಹಿಸಲಾರೆವು ಇನ್ನು ಮುಂದು
