STORYMIRROR

Lakumikanda Mukunda

Romance Fantasy

2  

Lakumikanda Mukunda

Romance Fantasy

ಮತ್ತೆ ಮೂಡದೆ ನಿನ್ನೊಲವು

ಮತ್ತೆ ಮೂಡದೆ ನಿನ್ನೊಲವು

1 min
124

ಬಾಳ ಚೆಂದ್ರಮ ಮೂಡಿರುವ

ಚೆನ್ನ ಒಲವಿಗೆ ತಡಕಾಡುವ

ಎದೆಯಾಳದಿ ನೀ ಗಮನಿಸದೆ

ಒಲವ ಸಾವಿನ ಒಳ ಭಾದೆ..


ಮರಳುತನವೇಕೆ ಓ..ಮನ

ಎಲ್ಲಿ ಹೋಯ್ತು ನಿನ್ನ ಗಮನ‌‌..

ಇರುಳು ಕಾಡುವ ಭಾವಗಳು

ಕೊರಳ ಹಿಂಡಿವೆ ನೋವುಗಳು..


ಒಲವ ಕನಸಿನಾ ಕನ್ನಿಕೆಯೇ

ವಿರಹದುರಿಯ ನೀನರಿಯೇ.?

ಚೆಲುವ ಮನಸಿನ ಕಾವ್ಯವೇ

ನನ್ನೊಲವ ಸಾವನೆ ಸಾರಿವೆ..


ನೀನಿರದೆ ಜಗವಿದು ಮೌನ

ಮಿಡಿದ ಹೃದಯವೆ ಸ್ಥಂಬನ..

ಮತ್ತೆ ಮೂಡದೆ ಒಲವ ಸಾಲು

ಸಾಲುಗಟ್ಟಿದ ಕಂಬನಿಯಲು..


ನೀ ಬಾ ಬೇಗ ನನ್ನೋಲವೆ

ಉಸಿರೊಂದನು ಹಿಡಿದಿರುವೆ

ಒಡಲ ಸ್ವಪ್ನಗಳೇ ಮೈದಾಳಿ

ಸೂಸಲಿ ಪ್ರೇಮದ ತಂಗಾಳಿ


Rate this content
Log in

Similar kannada poem from Romance