STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಮರಣಾನಂತರದ ಜೀವನ

ಮರಣಾನಂತರದ ಜೀವನ

1 min
349

ದೇಹವದು ನಶ್ವರ 

ಆತ್ಮವದು ಶಾಶ್ವತ 

ಎನ್ನುವುದು ಪುರಾಣ

ದೇಹಕ್ಕೆ ಸಂಸ್ಕಾರ

ಆತ್ಮಕ್ಕೆ ನಿಷ್ಕ್ರಮಣ

ನಡೆಸುವುದು ಧರ್ಮ

ಕಾಣದ ಆತ್ಮ 

ಕೆಲದಿನಗಳ ತನಕ

ಓಡಾಡುವುದು ಸುತ್ತ

ಮತ್ತೆ ಸೇರುವುದಂತೆ 

ದೇವರ ಪಾದವ

ಅಲ್ಲಿ ಆತ್ಮದ ಉನ್ನತಿಗೆ

ಇಲ್ಲಿ ಕರ್ಮವ ಮಾಡಿ

ಗಳಿಸಬೇಕಂತೆ 

ಅಲ್ಲಿಯ ಉನ್ನತಿಗೆ 

ಇಲ್ಲಿಯ ಉತ್ತಮವೇ 

ಮಾರ್ಗವೆಂಬರು ಹಿರಿಯರು

ಅದನರಿತು ಬಾಳಿದರೆ 

ಬದುಕಿನಾಚೆಯ ಲೋಕವದು

ಸ್ವರ್ಗವಾಗುವುದು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics