ಮರೆಯಲಾಗದು ನಿನ್ನ 2020
ಮರೆಯಲಾಗದು ನಿನ್ನ 2020
ಮರೆಯದ ವಿಷಯಗಳೇ
ನಿನ್ನೊಡಲಲಿ ಗುಡ್ಡೆಯಾಗಿದೆ ಕೇಳೇ
ಕಲುಷಿತ ಗಂಗೆ ನಿನ್ನಿಂದ
ಪಾವನವಾದದು ಮರೆಯಲಾದೀತೆ ?
ಹಕ್ಕಿಗಳ ರೆಕ್ಕೆಯನು ಮತ್ತವಕೆ
ನೀಡಿ, ನಿರ್ಭಯದಿ ಅವು
ಹಾರಾಡಿದ್ದು ಮರೆಯಲಾದೀತೆ ?
ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ
ಅತ್ತೆ, ಅಣ್ಣ, ತಂಗಿ ಎಲ್ಲರೊಂದೆಡೆ
ಸೇರಿಸಿದ್ದು ಜನುಮಕ್ಕೂ ಮರೆಯಲಾದೀತೆ?
ಸ್ವಚ್ಛತೆಯೇ ಆರೋಗ್ಯದ ಮೂಲವೆಂದು
ಎಚ್ಚರಿಸಿದ್ದು ಮರೆಯಲಾದೀತೆ ?
ಕೊನೆಗೂ ನಮ್ಮ ಹಳ್ಳಿ ಜೀವನವೇ ಯೋಗ್ಯ
ಎಂದಿದ್ದು ಮರೆಯಲಾದೀತೆ ?
ಪಿಜ್ಜಾ ಬರ್ಗರ್ನಿಂದ ಮಹಿಳಾಮಣಿಗಳು
ಅಡುಗೆಮನೆಗೆ ಲಗ್ಗೆಯಿಟ್ಟು
ತರಹೇವಾರಿ ಖಾದ್ಯ ಮಾಡಿ
ಗಂಡನ ಮೇಲೆ ಪ್ರಯೋಗಿಸಿದ್ದಂತೂ.
ಆಜೀವ ಪರ್ಯಂತ ಮರೆಯಲಾದೀತೆ!
ಎಲ್ಲ ಕಿತ್ತುಕೊಂಡಂತೆ ಮಾಡಿ
ಹೆಚ್ಚೇ ಕೊಟ್ಟ ನಿನ್ನನ್ನು
ಮರೆಯಲಾದೀತೆ ಮಿತ್ರ 2020.
