ಮರೆತು ಹೋದವಳು ಆಕೆ
ಮರೆತು ಹೋದವಳು ಆಕೆ
ಮರೆತು ಕೂಡಾ ಜರಿಯದಿರಿ
ಆಕೆಯನ್ನು ಜಾರ ಸ್ತ್ರೀ ಆದ ಮಾತ್ರಕ್ಕೆ.!
ಕೆಂಪು ಸೀರೆ, ಮಲ್ಲಿಗೆ ತೊಟ್ಟು,
ಬೀದಿ ಕೊನೆಯಲ್ಲಿ ನಿಂತ ಮಾತ್ರಕ್ಕೆ.!
ದೇಹ ಉಂಡರು ಚಾಂಡಾಲರು
ಆಕೆಯ ಅಂತರಾಳವ ಅರಿಯದೆ ಹೋದರು.
ಕ್ಷಣ ಕಾಮ ಮಾತ್ರಕ್ಕೆ.!
ಹಸಿದ ಹೊಟ್ಟೆಯಲ್ಲಿ ಹೊತ್ತು ಕಳೆದಳು
ಆಕೆ, ತುತ್ತು ಅನ್ನ ಮಾತ್ರಕ್ಕೆ .!
ಕಡೆಗೆ ನಿನ್ನ ಮನೆಯ ಸೀತೆಗೆ
ಜೀವದಾತೆಯೋ ಆಕೆ ,
ಕೊನೆಗೆ ಜರಿಯದೆ ಬಿಟ್ಟಿರೇ ಹೇಗೇ
ಈ ಸಮಾಜ ಇರುವುದು , ಕೇವಲ ನಾಮ ಮಾತ್ರಕ್ಕೆ ..!
ಕೇವಲ ನಾಮ ಮಾತ್ರಕ್ಕೆ..!
