ಅಪ್ಪ ನೀ ಯಾಕ ಹಿಂಗದಿ.?
ಅಪ್ಪ ನೀ ಯಾಕ ಹಿಂಗದಿ.?
1 min
103
ಅಪ್ಪ ನೀ ಯಾಕ ಅರ್ಥಾಗಲ್ಲ ಅಂತಿ...?!!
ನಿಂತ್ರ ಬೈತಿ,
ಕುಂತ್ರ ಬೈತಿ,
ನಾ ಸಿಟ್ಟಾಗಿ ಕಣ್ಣಿಗೆ ಮರೆಯಾದ್ರ
ನನ್ನ ಮಗ ಊಂಡ್ನೊ ಇಲ್ಲಾ
ಅಂತ ದಿನ ಪೂರ್ತಿ ಮರಗ್ತಿ
ಅಪ್ಪಾ ಮತ್ತ ನೀ ಯಾಕ ಅರ್ಥಾಗಲ್ಲಂತಿ....?!!
ಊರ ಶಾಣೆಮಂದಿ ಉದಾಹರಣೆ ಕೊಟ್ಟ
ಉದ್ದಾರಾಗ್ಲಿ ಅಂತ ಬುದ್ಧಿ ಹೇಳ್ತಿ,
ಮತ್ತ ನನ್ನ ಮಗ ನಂಗ ರಾಜಕುಮಾರ ಅಂತಿ
ಮತ್ತ ಯಾಕಪಾ ನೀ ಅರ್ಥ ಆಗಲ್ಲಂತಿ...?!!
ಹಬ್ಬಕ್ಕ ಹುಣಮಿಗೆ
ಅವ್ವಗ ಸೀರಿ ಕುಬಸಾ ತರತಿ
ನನಗ ರಂಗಬಿರಂಗ ಅಂಗಿ ತೊಡಸಿ
ಮನಸಾರೆ ಖುಷಿ ಪಡ್ತಿ
ನೀ ಟ್ಯಾಪಿ ಹಚ್ಚಿದ ಹಳೆ ಅಂಗಿ ತೊಟ್ಟ
ನನ್ನ ಹೆಗಲಮ್ಯಾಲ ಕೂರಸಿ
ಊರ ಜಾತ್ರಿ ತೊರಸ್ತಿ
ಮತ್ತ ಯಾಕಪಾ ನೀ ನಂಗ ಅರ್ಥಆಗಲ್ಲ ಅಂತಿ
