STORYMIRROR

Mouna M

Classics Inspirational Others

4  

Mouna M

Classics Inspirational Others

ಮಹಿಳೆ

ಮಹಿಳೆ

1 min
353


ಓ ಮಹಿಳೆ ಊದು ನೀ ಕಹಳೆ 

ತೊಡು ನೀ ಧೈರ್ಯದ ಬಳೆ ... 

ಸಾರು ಪ್ರಪಂಚಕೆ ಅಲ್ಲ ನೀ ಅಬಲೆ 

ದಿಟ್ಟತನವ ತೋರಿ ನೀ ಆಗು ಸಬಲೆ 

ಹುಟ್ಟುತಾ ಅಮ್ಮನಾಗಿ ಮರಣದಿ ಅಜ್ಜಿಯಾಗಿ 

ಎಲ್ಲರಿಗೂ ನೀ ತಲೆ ಬಾಗಿ 

ನಡೆದದ್ದು ಸಾಕು, ಕೊಡು ನಿನ್ನ ಬೇಕು ಬೇಡಗಳ ಬಗ್ಗೆ 

ಗಮನ, ಆಗಲೇ ನೀನಾಗುವೆ ಸಂತಸದ ಬುಗ್ಗೆ 

ಬೇಡ ಎಂದಿಗೂ ಚಿಂತೆ ಇನ್ನೊಬ್ಬರ ಬಗ್ಗೆ...

ಇರುವುದೊಂದೇ ಬಾಳು ವ್ಯಥೆ ಬೇಡ ನಿನಗೆ 

ನಿನ್ನ ಕರುಳಿನ ಬಗ್ಗೆ. ಆ ಭಗವಂತ ತೋರುವ ದಾರಿ ಅವಗೆ 

ಗುರಿಯೊಂದಿದ್ದರೆ ಸಾಕು, ದೇವರೇ ಕೊಡುವ ವರ 

ಆತ್ಮ ವಿಶ್ವಾಸದಿ ಗೆಲುವೆ ಮನ ಎಲ್ಲರ ... 

 ಸಂಯಮದಿ ನಡೆ ಮುಂದೆ, ಮುಂದೆಲೆಯ ಸರಿಸುತ 

ಧೈರ್ಯಮ್ ಸರ್ವತ್ರ ಸಾಧನಮ್ ಎನುತ ... 

ಧೈರ್ಯಮ್ ಸರ್ವತ್ರ ಸಾಧನಮ್ ಎನುತ ... 


 


Rate this content
Log in

Similar kannada poem from Classics