STORYMIRROR

Revati Patil

Abstract Classics Inspirational

3  

Revati Patil

Abstract Classics Inspirational

ಮಗಳೆಂಬ ಕಡಲಡಿಯ ಸ್ವಾತಿಮುತ್ತು

ಮಗಳೆಂಬ ಕಡಲಡಿಯ ಸ್ವಾತಿಮುತ್ತು

1 min
203

ಕೇಳೆ ನನ್ನ ಕಡಲಡಿಯ ಮುತ್ತೇ

ನಾ ನಿನ್ನ ಕಪ್ಪೆಚಿಪ್ಪು, 

ನೀ ಎನ್ನರಸಿ ಸ್ವಾತಿಮುತ್ತು.

ಬಿಟ್ಟಿರದಾದೆ ನಿನ್ನ ತುಂಬ ಹೊತ್ತು, 

ಅದಾವ ಬಂಧವಿದೋ ಯಾರಿಗೆ ಗೊತ್ತು?


ಗರ್ಭದಲ್ಲಿ ನೀ ಅಡಗಿದ ಆ ನವಮಾಸ

ಕಂಡಿದ್ದೆ ಇದೇ ಸ್ವಾತಿಮುತ್ತಿನ ಕನಸ

ತಾಯ ಗರ್ಭವೇ ಮಗುವಿಗೆ ಕವಚಾರಕ್ಷ 

ನಸುನಕ್ಕೇ ಕನಸಲೂ ಬೀರುತ ಸುಹಾಸ.



ಕೊನೆಗೂ ಗರ್ಭ ಕವಲೊಡೆದು 

ಮಡಿಲು ಸೇರಿತು ಸ್ವಾತಿಮುತ್ತು.

ಬೆಲೆಕಟ್ಟದ ಮುತ್ತಿದೆಂದು ತಿಳಿದು

ಹಣೆಗೊಂದು ಹೂ ಮುತ್ತನಿಟ್ಟು

ಎದೆಗವಚಿದೆ ಪ್ರತಿಸಾರಿ ಸೋತು.



ನನ್ನ ಸ್ವಾತಿ ಮುತ್ತಿದು ನನ್ನದು, 

ಎಂದೂ ಮಾಸದ ಅನರ್ಘ್ಯ ರತ್ನವಿದು.

ಈ ಚಿಪ್ಪು ಮುಪ್ಪಾಗಿ ಒಡೆಯುವ ಮೊದಲು

ಆ ಸ್ವಾತಿಮುತ್ತಿಗೂ ಒಂದು ಮುತ್ತಿರಲಿ !


ತಾಯ್ತನ ಪೂರ್ಣವಾಯಿತು ನಿನ್ನಿಂದ.

ಈ ಸ್ವಾತಿಮುತ್ತು ನೋಡುವಾಗೆಲ್ಲ, 

ಅರಿವಿಲ್ಲದೇ ಹನಿ ಜಾರುವುದೇಕೊ ಕಣ್ಣಿಂದ.

ನಾ ಆಭಾರಿ ನಿನಗೆ ಮನಸ್ಸಿಂದ.


ಓ ಕಡಲಡಿಯ ಮುತ್ತೆ..


Rate this content
Log in

Similar kannada poem from Abstract