STORYMIRROR

Kalpana Nath

Classics Fantasy Others

3  

Kalpana Nath

Classics Fantasy Others

ಮಾಲಿಯ ನಿಷ್ಠೆ

ಮಾಲಿಯ ನಿಷ್ಠೆ

1 min
47

 

ಕಿತ್ತು ತಂದ ಬಾಳೆ ಹಣ್ಣು 

ಕೂತು ತಿಂದ ಹೆಣ್ಣ ಮೇಲೆ

ಬಿತ್ತು ಕಾವಲಿಗನ ಕೆಂಪು ಕಣ್ಣು 


ಸುತ್ತ ತಿರುಗಿ ನೋಡಿದಾಗ 

ಅತ್ತ ಯಾರು ಇಲ್ಲವೆಂದು 

ಮತ್ತೆ ಉಳಿದ ಹಣ್ಣ ತಿಂದಳು


ಬಿತ್ತು ಬೆನ್ನ ಮೇಲೆ ಮೂರು 

ಬೆತ್ತ ಹಿಡಿದ ಮಾಲಿ ಕೈಯ್ಯಲಿ 

ಕಿತ್ತು ಕಟ್ಟೆ ಒಡೆದ ದುಃಖದಲ್ಲಿ 

ಹುತ್ತದಲ್ಲಿ ತನ್ನ ಕೈಯ್ಯ ಇಟ್ಟಳು 


ಸುತ್ತ ಇದ್ದ ಜನರೇ ಕೂಗಲಾಗಿ 

ಇತ್ತ ಅವನು ಓಡಿ ಬಂದನು 

ಮುತ್ತನಿತ್ತು ಕೈಯ್ಯ ತೆಗೆಸಿ 

ಅತ್ತು ತನ್ನ ಮಡದಿ ಇವಳೆಂದನು


Rate this content
Log in

Similar kannada poem from Classics