ಲೇಖನಿ
ಲೇಖನಿ
ಮಾನವನ ಮನಸ್ಸು ಲೇಖನಿಗಿಂತ ಹರಿತವಾದದ್ದು
ಲೇಖನಿ ಇಲ್ಲದೆ ಲೇಖನವಿಲ್ಲ,ಲೇಖನಿಯು ಲೇಖನದ ಬುನಾದಿ
ಶಾಹಿ ಇಲ್ಲದ ಲೇಖನಿಯು ತೋರಿಸುವುದು ನಿಸ್ತೇಜ
ಶಾಹಿ ಇರುವ ಲೇಖನವು ತೋರಿಸುವುದು ತೇಜ.
ನರನು ಭಾವನೆಗಳನ್ನು ವ್ಯಕ್ತಪಡಿಸುವನು ಶಬ್ಧದಲಿ
ಕವಿಯು ನರನ ಭಾವನೆಗಳನ್ನು ಲೇಖನದ ಮೂಲಕ ವ್ಯಕ್ತಪಡಿಸುವನು ನಿಶ್ಯಬ್ಧದಲಿ.
ಲೇಖನಿಯ ಬರಹಗಳು ನರನ ಮನಸ್ಸಿಗೆ ಪ್ರತಿಬಿಂಬಿಸುವವು ದರ್ಪಣದ ಹಾಗೆ.
ಲೇಖನಿ – ಲೇಖನ ಸ್ನೇಹಜೀವಿಯಂತೆ ,ಮಾನವನ ಬೆಸುಗೆಯ ಕೊಂಡಿಯಾಗಿದೆ. ಲೇಖನಿಯು ಲೇಖನದ ಬರಹಗಳ ಆತ್ಮವಿದಂತೆ.
ಲೇಖನಿಯ ಬರಹಗಳು ಮಾನವನ ಬದುಕಿನ ಜೀವನದ ಬೆಸುಗೆಯಾಗಿದೆ.
ಬದುಕು – ನಂಬಿಕೆ ದೇಶ ವಿದೇಶಗಳ ಸ್ನೇಹ – ಒಪ್ಪಂದಗಳ ಲಿಖಿತ ಪತ್ರಗಳ ಲೇಖನಿ ಶಾಹಿಯ ಮೇಲೆ ನಿಂತಿದೆ.
ಲೇಖನಿ ಇಲ್ಲದೆ ಜೀವನವಿಲ್ಲ , ಲೇಖನಿ ಬಳಸದೆ ಇದ್ದರೆ ಮಾನವನ ಜೀವನ ಶಾಹಿ ಇಲ್ಲದ ಲೇಖನಿಯಂತಾಗುತ್ತದೆ.
