ಕವನ
ಕವನ
ಬರೆಯಲಾರೆ ನಾ ಕವನವ
ಮಾರ್ಗ ದೇಸಿ ಮಾರ್ಗದಲಿ
ಪಂಪ ರನ್ನ ಜನ್ನ ಪೊನ್ನನಂದದಿ
ಮೂಡಿಸಲಾರೆ ಷಟ್ಪದಿಯ
ಕುವರವ್ಯಾಸ ಲಕುಮೀಶ
ರಾಘವಾಂಕ ಮಹಾಕವಿಗಳಂದದಿ
ಹರಿಸಲಾರೆ ನಾ ಮನದ ಭಾವಗಳ
ನವೋದಯ ಕಾವ್ಯ ಲಹರಿಯೊಳು
ಬೇಂದ್ರೆ ಕುವೆಂಪು ಮಹಾಕವಿಗಳಂದದಿ
ಆದರೂ ಕವನ ಬರೆವ ತುಡಿತ
ಬರೆದೇ ಬಿಡುವೆನು ನನ್ನದೇ ಶೈಲಿಯಲಿ
ಹರಿಯ ಬಿಡುವೆನು ಮನದ ಲಹರಿಯ
ಕವನ ಮೂಡುವ ಸಮಯ
ಅದೊಂದು ಕವಿ ಸಮಯ
ಸುಪ್ತ ಪ್ರತಿಭೆಯ ಅನಾವರಣ