ಕನಸು
ಕನಸು
ಅರಳು ಓ ಕನಸೇ
ನನ್ನೆದೆಯಾ ನೆಲದೊಳಗೆ
ಮಿಂಚಾಗಿ ಬಾ ಬದುಕಿನಲಿ
ತುಂತುರ ಸಿಂಚನವಾಗಲಿ ಮನಸಿಗೆ
ಹರಿಸಿ ಒಲವಿನ ಹರುಷ
ಹರಸು ಬಾ ಬದುಕನು
ಮನಸಿನ ಭಾವ ಇದು
ಕನಸಿನ ಮಾತು ಇದು
ಹದವಾಗಲಿ ಬದುಕು
ಒಲವ ಸಮ್ಮಿಲನಕೆ,
ಹಿತವಾಗಿರಲಿ ಪಯಣ
ಇಂದು ನಾಳೆಗಳಲಿ..
ಹೃದಯದ ದನಿ ನೀ ಕನಸೇ
ಉಸಿರಿಗೂ ನೀನೇ ಪ್ರೇರಣೆ
ನಗುವಲ್ಲೇ ಗೆಲ್ಲಬೇಕು ಬದುಕು
ನಾಳೆಗಳ ನಗುವಾಗು ನೀ ಬದುಕಿಗೆ
ಅರಿವಿಲ್ಲದ ಕನಸುಗಳೂ
ಮರೆವಿಲ್ಲದೇ ಒಲವ ತುಂಬಿವೆ
ಬದುಕಿನಲಿ ಭರವಸೆಯು ನಿನ್ನಿಂದಲೇ
ಮನಸಿಲ್ಲಿ ಅಪೂರ್ಣ ನೀನಿರದಿರೆ
ಅರಳೋ ನಾಳೆಗಳು ಸ್ವಾಗತಿಸಿವೆ ಕೈ ಬೀಸಿ
ನಾಳೆಗಳ ನಗುವಾಗು ನೀ ಕನಸೇ
ಬದುಕಿಲ್ಲಿ ಪರಿಪೂರ್ಣ ನಿನ್ನೊಂದಿಗೆ.!
