ಕನಸ್ಸು ಸೊಗಸು
ಕನಸ್ಸು ಸೊಗಸು
ಅಂದು ಹೊರಟಿದ್ದೆ ಶಾಲೆಗೆ
ಹತ್ತಿ ಸೈಕಲ್,
ದಾರಿ ಮಧ್ಯ ನಿಲ್ಲಿಸಿ,
ನೋಡುತಿದ್ದೆ ಮಿರಾಕಲ್.
ಆಹಾ! ನವಿಲಿನ ಕುಣಿತಾ,
ಕೋಗಿಲೆಯಾ ಸಂಗೀತಾ !
ಎಷ್ಟೋಸಲ ಅನ್ನಿಸಿದ್ದುಂಟು ಇರಬಾರದಿತ್ತೇ......
ಹಕ್ಕಿಗಳಂತೆ ರೆಕ್ಕೆಗಳು.
ರೆಕ್ಕೆ ಹಚ್ಚಿದರೆ ಹಾರುವವೇ ಸೈಕಲ್ ಗಳು,
ರೆಕ್ಕೆಯೇ ಇಲ್ಲದಿದ್ದರೆ ಬದುಕುವವೇ ಹಕ್ಕಿಗಳು...!?
ರೆಕ್ಕೆ ಮಾಡುವುದೇ ಸೈಕಲ್ ಏರುವ ಮನಸ್ಸು (!?)
ಸುಮ್ಮನೆ ಕಾಣುತ್ತಿರುವೆ ನಾನು ಈಗೊಂದು ಕನಸು.
ಅದು ನನಸ್ಸಾದರೆ ಎಷ್ಟೊಂದು ಸೊಗಸು