STORYMIRROR

PRASANNA KUMAR

Classics Inspirational Others

4  

PRASANNA KUMAR

Classics Inspirational Others

ದಾರಿಹೋಕನ ಪದಗಳು

ದಾರಿಹೋಕನ ಪದಗಳು

1 min
352

               ೧

  ಆಸೆಗಳ ಸಮಾಧಿಯು ತ್ಯಾಗದ ಹಿಂದಿಹುದು

ಮೋಸದ ಬಣ್ಣಗಾರಿಕೆ ಕಂಗಳ ಮುಂದಿಹುದು

ಮನಸಿನ ಭಾಷೆಗಳ ಗಮನಿಸಿ ತಿಳಿದಾಗ

ಜೀವನ ಸ್ಫಟಿಕ ಹೊಳೆದಂತೆ – ದಾರಿಹೋಕ

             ೨

ಒಳಗಿನ ಶತೃಗಳ ಗೆಲ್ಲುವುದು ಸುಲಭವೇ ?

ಹೊರಗಿನ ವೈರಿಗಳ ಅಳಿಸುವುದು ಕಠಿಣವೇ ?

ಪ್ರಶ್ನೆಗಳ ಸುರಿಮಳೆ ತೆರೆಗಳ ಹೆಚ್ಚಿಸಿದೆ ಯಕ್ಷ

ಪ್ರಶ್ನೆ ಜೀವನದುತ್ತರ – ದಾರಿಹೋಕ

             ೩

ಕುದಿಯುವ ನೀರಿನಲಿ ಬಿಂಬವದು ಕಾಣುವುದೆ ?

ಕೋಪದಲಿ ಇರುವಾಗ ಸತ್ಯವದು ತಿಳಿವುದೇ ?

ದುಡುಕದೆ ಗಮನಿಸೆ ಎಲ್ಲವೂ ತಿಳಿವುದು 

ಬೇಕು ಸಹನೆಯು ನಿನಗೆ – ದಾರಿಹೋಕ

              ೪

ಕೇಳುತಿರು ಮಾತುಗಳ ನಂಬದಿರು ಎಲ್ಲವನು

ಕಿವಿಗೆ ಸೇರುವ ಸತ್ಯ ತಡವೆಂದು ತಿಳಿ ನೀನು

ತಿಳಿವಿಗೆ ಮಬ್ಬಿರಲು ಸುಳ್ಳು ಬೇಗ ಒಪ್ಪುವುದು

ನಿನ್ನ ಮನದರಿವೆ ಗುರುವೈ – ದಾರಿಹೋಕ

              ೫

ಮನೆಯೆಷ್ಟು ಹಿರಿದೆಂದು ಹೇಳದಿರು ಮನುಜನೇ ?

ಸಂತಸವು ಎನಿತುಂಟು ಹೇಳುವೆಯ ಗೆಳೆಯನೆ ?

ಹಣದಿಂದ ಎಲ್ಲವನು ಅಳೆಯದೆ, ಜೀವನದಿ ಪ್ರೀತಿ

ಪ್ರೇಮದ ಸವಿ ಸವಿಯೋ - ದಾರಿಹೋಕ


साहित्याला गुण द्या
लॉग इन

Similar kannada poem from Classics