STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಹೋಲಿ

ಹೋಲಿ

1 min
357

ಬವಣೆ ಪಡುತಿಹ

ಜನರ ಬದುಕಿಗೆ

ನಲಿವ ನೀಡುವ

ತೆರದಿ ಬಂದಿಹ

ಬಣ್ಣದೋಕುಳಿಯ

ರಂಗಿನಾಟದ 

ಹೋಲಿ ಹಬ್ಬದ ಸಡಗರ॥

ಕೆಂಪು ಬಣ್ಣವು

ಪ್ರೀತಿ ಸೂಚಕ

ಮನಕೆ ಉಲ್ಲಾಸ

ತುಂಬಲಿ ನಿರಂತರ॥

ಹಳದಿ ಬಣ್ಣವು

ಸತತ ಸಂತಸ

ಧ್ಯಾನ ಶೀಲತೆ ಬೆಳೆಸುತ

ಶಾಂತಿಯ ನೀಡಲಿ॥

ನೀಲ ಮೇಘ 

ಶ್ಯಾಮ ವರ್ಣವು 

ದೈವಿಕತೆಯ ಪ್ರತಿರೂಪವು

ಶಾಂತ ಮನಕೆ ಸ್ಪೂರ್ತಿಯು॥

ತುಂಬಿತುಳುಕುವ

ಪ್ರಕೃತಿಮಾತೆಯ

ಹೊಸತನಕೆ ಸಾಕ್ಷಿಯು

ಹಸಿರು ಬಣ್ಣದ ನೋಟವು॥

ಸ್ವಸ್ಥ ಬದುಕಿನ

ಯುವಕರಲ್ಲಿ

ಮನದ ರಾಗಕೆ

ಸಾಕ್ಷಿ ಗುಲಾಬಿಯು॥

ಇಂತು ಬಣ್ಣದಿ

ಮೆರೆದ ಹೋಲಿಯು

ಜಗಕೆ ಒಳಿತನು

ಮಾಡಲಿ॥

ಒಂದೆ ಮನದಲಿ

ಬೇಡಿಕೊಳ್ಳುವ

ಜನರ ಆಸೆಯ

ಪೂರೈಸಲಿ॥



Rate this content
Log in

Similar kannada poem from Classics