ಕೆಂಪು ಖಾರ
ಕೆಂಪು ಖಾರ
ಕೆಳಗೆ ಕೆಂಪಿದ್ದರೇನಂತೆ..?
ತಂಪಾದ ನಿದ್ದೆ ನನಗಿಂದು ಬಂದಿದೆ.
ಲೋಕವೆಲ್ಲ ಎದ್ದು ಕೆಲಸದ
ಧಾವಂತದಲ್ಲಿ ತೊಡಗಿದ್ದರೇನಂತೆ..?
ನನ್ನ ನೆಮ್ಮದಿಯ ನಿದ್ರೆಗೆ ಇದಾವುದೂ
ಭಂಗ ತರುವುದಿಲ್ಲ..!!
ಸೂರ್ಯನ ಕೆಂಪು, ಇಳೆಯ ಕಂಪು,
ಗಾಳಿಯ ತಂಪು ಇವೆಲ್ಲವೂ ನನ್ನೊಡನಿರುವಾಗ,
ಈ ಮೆಣಸಿನ ಕೆಂಪು ನನ್ನ ನಾಟುವುದಿಲ್ಲ..!!
ಯಾರೇನೇ ಕಷ್ಟ ಬಗೆದರೂ,
ಬಂಡೆ ಕಲ್ಲಿನಂತೆ ನಾನಿದ್ದರೆ
ಕೆಂಪು ಕಾರುವ ಖಾರದ ಮೆಣಸೂ
ನನ್ನ ಮುಂದೆ ಸುಮ್ಮನೆ ಇದ್ದು ಬಿಡುವುದಲ್ಲ..!!
