STORYMIRROR

Lakumikanda Mukunda

Abstract Classics Inspirational

4  

Lakumikanda Mukunda

Abstract Classics Inspirational

ಕೈ ಬಿಡಬೇಡ

ಕೈ ಬಿಡಬೇಡ

1 min
317

ಕೇಳು ಎಡರು ತೊಡರಿನ ಜೀವನವಿದು 

ಬರಡು ಬದುಕಲ್ಲೆ ಹರಡು ಸುಗಂಧ

ಬಿಡದಿರು ನಿನ್ನ ಗುರಿಯತ್ತ ಹೆಜ್ಜೆ ಹಾಕುವುದ.


ಮತ್ತೆ ಬಿಡಬೇಡ ಹಳೆಯ ನೆನಪುಗಳ

ನಾಳೆಯ ಬದುಕು ಸುಂದರವಾಗಲಿ

ನಿನಗೆ ನಾಳೆಯೇ ಪಟ್ಟಾಭಿಷೇಕವಂತೆ


ಮತ್ತೆ ಬಿಡಬೇಡ ಹಿಡಿದ ಕೆಲಸವನ್ನೂ

ಮುಗಿಸಿ ಬಿಡು ಅಚ್ಚುಕಟ್ಟಾಗಿ

ಅದರ ಫಲವು ನಿನ್ನನ್ನು ಹುಡಕಲಿ


ಮತ್ತೆ ಬಿಡಬೇಡ ಒಳ್ಳೆಯ ಮಾರ್ಗ

ಕೆಟ್ಟ ಮಾರ್ಗದಲಿ ಹೋಗದಂತೆ

ಮನಸ್ಸನ್ನು ಗಟ್ಟಿಯಾಗಿ ಕಟ್ಟಿಬಿಡು


ಮತ್ತೆ ಬಿಡಬೇಡ ಗುರು ಹಿರಿಯರ ಸೇವೆ

ಅವರ ಆಶಿರ್ವಾದ ಸಿಕ್ಕಾಗ ನೀನು

ದೈವತ್ವಕ್ಕೆ ಸಮಾನವಾಗುವೆ ನೀನು


Rate this content
Log in

Similar kannada poem from Abstract