STORYMIRROR

Prabhakar Tamragouri

Classics Inspirational Others

4  

Prabhakar Tamragouri

Classics Inspirational Others

ಕಾಮನಬಿಲ್ಲು

ಕಾಮನಬಿಲ್ಲು

1 min
310

ಯಾವುದೇ ಚಿಂತೆಯಿಲ್ಲದೆ 

ಬಿದ್ದುಕೊಂಡ ನೀಲಿಬಾನು 

ರೆಕ್ಕೆಬಿಚ್ಚಿ ಹಾರುತಿದೆ ಹಕ್ಕಿ ಕೆಳಗೆ 

ಮೋಡಗಳಿಲ್ಲದ ಶುಭ್ರ ನೀಲಾಗಾಸ 

ನಿರುಮ್ಮಳತೆಯ ತಿಳಿಹರಿವು 


ಕತ್ತರಿಸಿಟ್ಟ ತುಂಡು ಕಾಗದ 

ಒಂದು ಕಪ್ಪು ಚುಕ್ಕೆಯೂ ಇರದ 

ಬಿಳಿ ಕಾಗದ ಬಿಡಿಸಿತು ಚಿತ್ತಾರ

ಹಸನುಗೊಳಿಸಿದ ನೆಲದಂತೆ ......

ಸಿಂಗಾರಗೊಳ್ಳುವ ನವವಧುವಂತೆ ......


ಆದರೆ , ಮನಸ್ಸು ಮಾತ್ರ ಶಾಂತವಲ್ಲ 

ಗಲಿಬಿಲಿ .... ಅವಾಂತರ 

ಗೂಡು ಸೇರುವ ತವಕದಲಿ 

ಹಕ್ಕಿಗಳ ಉಲಿವ ಚಿಲಿಪಿಲಿ 

ಪದಗಳ , ಪದಗುಚ್ಛಗಳ ಭರಾಟೆಯಲಿ

ಅದು ಇರಲಿ , ಇದು ಇರಲಿ 

ಮೇಲೆ , ಕೆಳಗೆ , ಹಾಗೆ ಹೀಗೆ 

ಜಾತ್ರೆಯಲ್ಲಿನ ಭರಾಟೆ 


ಅಂತೂ , ಶಬ್ದಗಳು ಸಿಕ್ಕ ಅನುಭವವೋ 

ಅನುಭವಕ್ಕೆ ದಕ್ಕುವ ಶಬ್ದಗಳೋ 

ಶಬ್ದಗಳು ಹೇಳಬೇಕಾದ ನಿಶ್ಯಬ್ದತೆಯೋ 

ನಿಶ್ಯಬ್ದತೆಯಲ್ಲಿ ಸಿಗುವ ಶಬ್ದಗಳೋ 

ತಿಳಿಯದ ಸಂದಿಗ್ಧತೆಯಲ್ಲಿ 

ಎಂದಿನಿಂದಲೋ ರಂಗಕ್ಕಿಳಿಯಲು 

ಸಜ್ಜಾಗಿರುವ ಅನುಭವವೋ 

ಇಲ್ಲ , ಕಲ್ಪನೆಯೋ ಗೊತ್ತಾಗದೆ

ಸಾಲುಸಾಲುಗೊಂಡು ಬಿಳಿ ಕಾಗದದ ಮೇಲೆ 

ಓಡಾಡುತ್ತಿದೆ ಬೆರಳ ಸಂದಿಯ ಪೆನ್ನಿನ ತುದಿ 

ಕಾಗದದ ತುದಿಗೆ ಶೀರ್ಷಿಕೆ 

ಮನದಾಳದಲ್ಲಿ ಕವಿತೆ ಬಳ್ಳಿಯಾಗಿ 

ಹರಡಿಕೊಳ್ಳುತ್ತಿದೆ ಹೀಗೇ.....

ಆಗಸದಂಚಿನಲ್ಲಿ ಬಣ್ಣದ ಕಾಮನಬಿಲ್ಲು .


 


विषय का मूल्यांकन करें
लॉग इन

Similar kannada poem from Classics