STORYMIRROR

Sahana Prasad

Romance

2  

Sahana Prasad

Romance

ಜತೆಗಿರಲು ನೀನು...

ಜತೆಗಿರಲು ನೀನು...

1 min
151

ಗಡ್ಡ ಬಿಳಿಯಾಯ್ತು

ಕೂದಲು ನೆರೆತಾಯ್ತು

ಮನಸ್ಸು ಪಕ್ವವಾಯಿತು

ದೇಹಕ್ಕೆ ದಣಿವಾಯಿತು

ಆದರೆ ಜೀವಕ್ಕೆ ಜತೆ ನೀನು

ಇಷ್ಟೊಂದು ವರುಷ

ನಡೆದು ಜತೆಯಲ್ಲಿ

ಕಲ್ಲು, ಮುಳ್ಳಿನ ಹಾದಿಯಲ್ಲಿ

ಜೀವನದ ಸಂಕಷ್ಟಗಳಲ್ಲಿ

ಜತೆಯಾಗಿ ಹಗ್ಗ ಎಳೆದು

ಬದುಕಿನ ಬಂಡಿ ಸರಿಯಾದ ದಾರಿಯಲಿ

ಎಳೆದೆಳೆದು, ಸುಸ್ತಾಗಿ

ಇಟ್ಟಾಗ ನಿಟ್ಟುಸಿರು

ಇದ್ದೆ ಪಕ್ಕದಲ್ಲಿ ನೀನು,


ನನ್ನೆದೆಯ ಮಿಡಿತದಲ್ಲಿ

ನಿನ್ನ ಹೆಸರು, ಯೋಚನೆ

ಹರೆಯದ ಆ ಗುಂಗು

ಇನ್ನೂ ಹಸಿ,

ಆಗಲೇ ಕವಿಯಿತಲ್ಲ

ಜೀವನ ಸಂಜೆ

ಮುಳುಗುತ್ತಾ ಬಂದ ಸೂರ್ಯ

ಆವರಿಸುತ್ತಾ ಬಂತು ಕತ್ತಲು.


ಹೆದರಿದೆ ಮನ

ನಡುಗಿದೆ ತಾನು

ಆವರಿಸಿದೆ ಭಯ

ಮನದಲ್ಲಿ, ನಾಳೆಯ ಬಗ್ಗೆ.

ಈ ಕ್ಷಣ ಜತೆಗಿದ್ದೀವಿ

ಮುಂದೇನೋ, ಹೇಗೋ!


ಜತೆಗೆಗೂಡಿ ಹೆಜ್ಜೆ ಹಾಕಿದ

ದಿನಗಳ ನೆನಪು

ಕೂಡುತ್ತಿದೆ ಕಣ್ರೆಪ್ಪೆಯಲ್ಲಿ

ಜತೆಗೆ ಇರೋಣ

ಸಾಗೋಣ ಆದಷ್ಟು

ದಿನ, ಒಟ್ಟಿಗೆ...ಖುಷಿಯಾಗಿ!!


Rate this content
Log in

Similar kannada poem from Romance