ಜೀವನದ ಎರಡು ರಸ್ತೆಗಳು
ಜೀವನದ ಎರಡು ರಸ್ತೆಗಳು
ಹುಟ್ಟು ಸಾವಿನ ಮಧ್ಯದ ಈ ಜೀವನ
ಸದಾ ಸಾಗುವ ನಿರಂತರ ಪಯಣ
ಎರಡು ಹಾದಿಯ ಮೇಲೆ ನಿಂತು
ಕರಡು ಜೀವನವ ಮೆಲುಕು ಹಾಕುತ್ತೆನೆ
ಯಾವ ಹಾದಿ ಸೂಕ್ತವೆಂದು ತಿಳಿಯದೆ
ಸುಮ್ಮನೆ ನಿಂತಿದ್ದೆನೆ ತಟಸ್ಥವಾಗಿಯೇ
ಯಾರೂ ಹೇಳುತಿಲ್ಲ,ನನಗೂ ಗೊತ್ತಿಲ್ಲ
ಯಾವ ಹಾದಿ ಸೂಕ್ತ ನೀವಾದರೂ ಹೇಳಿ?
ದಡದಲ್ಲಿ ಕೂತು ಸಾಗರದಾಚೆಗಿನ
ಕನಸು ಕಾಣುತ್ತೆನೆ,ನಗುತ್ತೆನೆ ಒಬ್ಬನೆ
ಗೊತ್ತಿಲ್ಲ,ಆಚೆ ಸುಂದರ ಬದುಕಿದೆ
ಯಾರೋ ಹೇಳಿದ್ದಾರೆ, ಬದುಕು ಸುಂದರವಂತೆ
ಎರಡು ಹಾದಿಯ ನಡುವೆ ನಿಲ್ಲಲಾಗದು
ಹೊರಡಲೆ ಬೇಕು ತಿಳಿದ ಕಡೆಗೆ
ನನಗಾಗೆ ಕಾಯುತ್ತಿದ್ದ ಆ ಹಾದಿಯಲ್ಲಿ
ಸಾಧನೆಯ ಶಿಖರವಿದೆಯಂತೆ ಇದೋ ನಾ ಹೊರಟೆ.
