ಇಂದೆಲ್ಲ ಕಲಿತೆ
ಇಂದೆಲ್ಲ ಕಲಿತೆ
ಜೀವನ ವಿಚಿತ್ರವೆನಿಸಿತ್ತು ಆಗ
ಮನಸ್ಸೆ ಕಲ್ಲಾಗಿ ಹೋದಾಗ,
ಕನನು ನನಸಾಗದೇ ಉಳಿದಾಗ ,
ಬದುಕೆಲ್ಲ ಶೂನ್ಯವೆಂದೆನಿಸಿದಾಗ,
ಸಂತೋಷವೆಲ್ಲ ಗೌಣವಾದಾಗ,
ಮೌನಗಳು ಮಿತಿಮೀರಿ ಅಬ್ಬರಿಸಿದಾಗ,
ಕಣ್ಣೀರ ಕೊಡಿಯೇ ಹರಿದಾಗ,
ನಗುವೆಲ್ಲೋ ವನವಾಸ ಕೈಗೊಂಡಾಗ,
ಎಲ್ಲವಿದ್ದೂ ಏನೂ ಇಲ್ಲವೆಂದೆನಿಸಿದಾಗ,
ಕಲಿತೆ ಈಗೆಲ್ಲ
ಇರುವುದರಲ್ಲೇ ನಗುವುದ
ಮೌನದಲ್ಲೇ ಮಾತಾಡುವುದ
ಶೂನ್ಯದಲ್ಲೇ ಉಸಿರಾಡುವುದ
ಗೌಣದಲ್ಲೇ ಬದುಕುವುದ !
