STORYMIRROR

Gireesh pm Giree

Inspirational

1  

Gireesh pm Giree

Inspirational

ಇಳೆಗೆ ತಂಪೆರೆದ ಮಳೆ

ಇಳೆಗೆ ತಂಪೆರೆದ ಮಳೆ

1 min
129

ಬಂದಿತು ಬಂದಿತು ಮಳೆ

ತುಂಬಿತು ಹರಿಯಿತು ಹೊಳೆ

ಹಸಿರಾಯಿತು ಪಸರಿಸಿತು ಇಳೆ

ಇಳೆಗೆ ಮಳೆಯೇ ಕಳೆ


ತಂಪೆರುವ ತಂಗಾಳಿಗೆ ಮನ ಜಾರಿತು

ಬಾಡಿದ ಗಿಡಮರಬಳ್ಳಿ ನಗು ಬೀರಿತು

ಬಾನಲ್ಲಿ ಬೆಳ್ಳಕ್ಕಿಗಳು ಗರಿಗೆದರಿ ಹಾರಿತು

ರಂಗಿನ ಹೂಗಳು ಧರೆಯಲ್ಲಿ ಅರಳಿತು


ಮಳೆಯಲ್ಲಿ ನೆನೆದ ಬಾಲ್ಯದ ದಿನಗಳು

ಹರಿವ ನೀರಲ್ಲಿ ಬಿಟ್ಟ ದೋಣಿಯ ಸಾಲುಗಳು

ಬಾಲ್ಯದ ದಿನವನ್ನು ನೆನಪಿಸಿದ ಈ ಮಳೆ

ನನ್ನ ಮನದಲ್ಲಿ ಹರಿಸಿತು ನೆನಪಿನ ಹೊಳೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational