ಈಡು ಜೋಡು
ಈಡು ಜೋಡು
ಯಾವ ಋಣವು ನಿನ್ನ
ನನ್ನೆಡೆಗೆ ಎಳೆದು ತಂದಿದೆ
ಎದೆಯ ಭಾವ ಹಾಡಾಗಿ
ಕವಿತೆಯಿಂದು ಮೂಡಿದೆ
ಅನುಮತಿ ಪಡೆಯದೆ
ಹೃದಯದೊಳಗೆ ಸೇರಿದೆ
ನಿನ್ನ ಒಲವು ಆವರಿಸಿ
ಬಿಟ್ಟಿರಲಾರದಂತೆ ಆಗಿದೆ
ಕಲ್ಲಿನಂಥ ಮನವಿಂದು
ಹೂವಿನಂತೆ ಅರಳಿದೆ
ಕರ್ಪೂರ ಕರಗಿದಂತೆ
ಮನವಿಂದು ಮಿಡಿದಿದೆ
ದುಂಬಿ ನಿನ್ನ ತುಂಟ ನಗೆಯು
ಎಳೆಯ ಮನವ ಸೆಳೆದಿದೆ
ಮೆಲ್ಲ ಮೆಲ್ಲನೆ ಕನ್ಯೆಯ
ಕನಸು ಕದ್ದು ಹೋಗಿದೆ
ಇಬ್ಬರ ಈಡು ಜೋಡು
ನಗೆಯ ಹಬ್ಬ ತಂದಿದೆ
ಜನುಮದ ಪುಣ್ಯವೋ ಏನೋ
ಎರಡು ಹೃದಯ ಬೆರೆತಿದೆ

