STORYMIRROR

Gireesh pm Giree

Abstract

2  

Gireesh pm Giree

Abstract

ಇದ್ದವನಿಗೆ ಈ ಕಾಲ

ಇದ್ದವನಿಗೆ ಈ ಕಾಲ

1 min
91

ಇದ್ದವನಿಗೆ ದೇವನು ಒಲಿಯುವ ಈ ಕಾಲದಲ್ಲಿ

ಸತ್ಯ ವಚನಗಳಿಗೆ ಬೆಲೆ ಇಲ್ಲದ ಈ ಯುಗದಲ್ಲಿ

ಮೋಸಕ್ಕೆ ಮೋಸ ಮಾಡುವವರೇ ಜಾಸ್ತಿ

ಮಾತುಮಾತಿಗೂ ಜಗಳ ವಂಚನೆ ಕುಸ್ತಿ


ಸುಳ್ಳು ಸಂತೆಯೂ ತುಂಬಾ ಬೀಡುಬಿಟ್ಟಿದೆ

ನ್ಯಾಯ ಕೇಳುವ ಬಾಯಿಗೆ ಬೀಗ ಜಡಿಯುತ್ತಿದೆ

ಅನ್ಯಾಯವ ಮಾಡಿ ಅವರಿಗೆ ಸಿಗುವುದು ತೃಣ ಸಂತಸ

ಅವನೇಕೆ ಮಾಡಿದ ಕೆಟ್ಟವರ ಸಹವಾಸ?


ಈ ಪುಣ್ಯಭೂಮಿಯಲ್ಲಿ ರಕ್ಕಸರಂತೆ ಕಿತ್ತಾಡುವರು

ಸಣ್ಣ ಸಣ್ಣ ವಿಷಯಕ್ಕೂ ಮನ ಮನೆಯ ನಿಂದಿಸುವರು

ಹಿರಿಯರು ಹೇಳಿದ ಮಾತು ಮೌನವೇ ದೇವರು

ಆದರೆ ಮೌನಕ್ಕೆ ಬೆಲೆ ಕೊಡುವರೇ ಇಂದಿನವರು?


Rate this content
Log in

Similar kannada poem from Abstract