STORYMIRROR

Ramamurthy Somanahalli

Inspirational Others

2  

Ramamurthy Somanahalli

Inspirational Others

ಹೆಣ್ಣು ಹೆಣ್ಣಲ್ಲವೋ...

ಹೆಣ್ಣು ಹೆಣ್ಣಲ್ಲವೋ...

1 min
120

ಹೆಣ್ಣು ಹೆಣ್ಣಲ್ಲವೋ ಅನುಜ

ಪ್ರಕೃತಿಯ ರೂಪವದು ಕಾಣೋ ಮನುಜ ||ಪಲ್ಲವಿ||


ಭುವಿಗೆ ತಂದಿತ್ತ ಜನ್ಮದಾತೆಯು ಹೆಣ್ಣು

ಬದುಕಲಾಸರೆ ನೀಡಿದ ಭುವಿಯೂ ಹೆಣ್ಣು 

ಹಸಿವು ನೀರಡಿಕೆ ನೀಗಿದ

ಗಂಗಾನ್ನಪೂರ್ಣೆಯರು ಹೆಣ್ಣು... ||ಹೆಣ್ಣು ಹೆಣ್ಣಲ್ಲವೋ||


ಅಜ್ಞಾನದಿಂ ಸುಜ್ಞಾನದೆಡೆಗೊಯ್ವ

ಜ್ಞಾನದಾತೆಯೂ ಹೆಣ್ಣು

ಬಾಳಿಬದುಕಲರ್ಥವ ನೀಡುತ

ನಮ್ಮನನವರತ ಪೊರೆವ ಶ್ರೀಮಾತೆಯೂ ಹೆಣ್ಣು... ||ಹೆಣ್ಣು ಹೆಣ್ಣಲ್ಲವೋ||


ಹುಟ್ಟು ಸಾವಿನ ನಡುವೆ

ಜೊತೆಗಿದ್ದು ಪೊರೆವಳು ಹೆಣ್ಣು

ಧರ್ಮಾರ್ಥ ಮೋಕ್ಷ ಸಾಧನೆಗೆ

ಸಹಚಾರಿಣಿಯಲ್ಲವೇ ಹೆಣ್ಣು .... ||ಹೆಣ್ಣು ಹೆಣ್ಣಲ್ಲವೋ||


ಹಗಲಿರುಳು ಬೇಧಿಸುವ

ಉಷಾನಿಶೆಯರು ಹೆಣ್ಣು

ಬದುಕೆಂಬ ಸಂತೆಯ ಕಂತೆಯೊಗೆದಾಗ

ಮಡಿಲ ನೀಡುವ ಭೂದೇವಿಯೂ ಹೆಣ್ಣು ||ಹೆಣ್ಣು ಹೆಣ್ಣಲ್ಲವೋ||


Rate this content
Log in

Similar kannada poem from Inspirational