ಗುರು ವಂದನೆ
ಗುರು ವಂದನೆ


ಗುರಿಯ ರೂವಾರಿಯಾಗಿ
ಗುಣ - ವಿಶೇಷಗಳ ರಾಯಭಾರಿಯಾಗಿ
ಗೌರಿಸುತನ ಪೂಜಾರಿಯಾಗಿ
ಗೋವಿಂದನ ಪ್ರಭಾರಿಯಾಗಿ
ಗರಿ ಬಿಚ್ಚಿ ಹಾರಲು ಕಲಿಸುವ ಗುರುತ್ವಾಕರ್ಷಣ ಶಕ್ತಿಯೇ
ಗಿರಿ ಶಿಖರಗಳ ಎತ್ತರಕ್ಕೆ ಬೆಳೆಸುವ ಪ್ರೇರಣಾಶಕ್ತಿಯೇ
ಅಜ್ಞಾನದಿಂದ ಜ್ಞಾನದೆಡೆಗೆ ವಲಿಸುವ ಜ್ಞಾನ ಜ್ಯೋತಿಯೇ
ಅರಿವು ಎಂಬ ಪರಿವನ್ನು ಪಸರಿಸುವ ಜಗ ಜ್ಯೋತಿಯೇ
ಓ ನನ್ನ ಗುರುವೇ, ಓ ನನ್ನ ಗುರುವೇ
ನಿನಗೆ ಕೋಟಿ ಕೋಟಿ ನಮನ!