STORYMIRROR

umme salma

Classics Inspirational Children

3  

umme salma

Classics Inspirational Children

ನನ್ನ ತಂದೆ

ನನ್ನ ತಂದೆ

1 min
327

ಕಣ್ಣನ್ನು ತೆರೆದಾಗ ಕಂಡಿದ ಶಿವನು ನೀನೇ

ಮನೆಯಂಬ ಗುಡಿಯಲಿ ನೆಲಸಿರುವ ದೈವವು ನೀನೇ

ನಿನ್ನ ನಡೆಯೇ ವಿದ್ಯಾದಾಯಿನಿ

ನಿನ್ನ ನುಡಿಯೇ ದಿವ್ಯವಾಣಿ

ನೀನೇ ನನ್ನ ಬಾಳ ಅನುಗ್ರಹ ತಂದೆ

ನೀನೇ ನನ್ನ ಸರ್ವಸ್ವ ನನ್ನ ತಂದೆ.


ನೀನು ಕಣ್ನತುಂಬ ನಿದ್ದೆ ಮಾಡಿದ್ದು ನೋಡಿಲ್ಲ ನಾನು

ನೀನು ಕಂಡು ಕಂಡದ್ದನ್ನು ಕೊಂಡಿದ್ದು ಕಂಡಿಲ್ಲ ನಾನು

ನಿನ್ನ ಮನದಲ್ಲಿ ತುಂಬಿತ್ತು ನಮ್ಮ ಉಜ್ವಲ ಭವಿಷ್ಯದ ಚಿಂತೆ

ನೀನು ದುಡಿದದ್ದೆಲ್ಲ ನಮ್ಮೆಲರಿಗಂತೆ

ನಿನ್ನ ಕಣ್ಣಲ್ಲಿ ನನ್ನ ಕನಸು-ನನಸುಗಳ ಕಂಡೆ 

ನೀನೇ ನನ್ನ ಸರ್ವಸ್ವ ನನ್ನ ತಂದೆ.


ನಿನ್ನ ನಗುವೆ ನನಗೆ ಕೋಟಿ ಧನ

ನೀನಿರುವ ತಾಣವೇ ನನಗೆ ದೇವಸ್ಥಾನ

ನಿನ್ನ ಪ್ರೀತಿಗೆ ಚಿರಋಣಿಯು ನಾನು

ನಿನ್ನ ಆಶೀರ್ವಾದದ ಅನುಗ್ರಹಿಯು ನಾನು

ನೂರು ವರುಷ ಸುಖವಾಗಿ ಬಾಳು ನೀನು ಮುಂದೆ

ನೀನೇ ನನ್ನ ಸರ್ವಸ್ವ ನನ್ನ ತಂದೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics