ಸಂಕ್ರಾಂತಿ
ಸಂಕ್ರಾಂತಿ
ಸಂಸ್ಕೃತಿಯನ್ನು ತೋರುವ ಸುಗ್ಗಿಯ ಹಬ್ಬ
ಎಳ್ಳು-ಬೆಲ್ಲ ಬೀರಿ ಹಂಚುವೆವು ಕಬ್ಬ
ಉತ್ತರಾಯಣದಲ್ಲಿ ಸೂರ್ಯನು ಮೂಡಿ
ಮಾಡುವನು ಜನರ ಮೇಲೆ ಬಲು ಮೋಡಿ
ಮನ-ಮನಗಳು ಬೆರೆತು, ಮನೆ-ಮನೆಗಳು ಕೂಡಿ
ಆಚರಿಸುವೆವು ಸುಗ್ಗಿ ಎಲ್ಲ ಜೊತೆಗೂಡಿ
ಜಾತಿ-ಭೇದ ಮರೆತು
ಪ್ರೇಮ ಭಾವ ಬೆರೆತು
ಭೂತಾಯಿಗೆ ನತಮಸ್ತಕರಾಗಿ
ಆನಂದಿಸುವೆವು ಸ್ನೇಹದ ಸುಗ್ಗಿ
ಸದಾ ನೆಲಸಲಿ ಶಾಂತಿ
ನಿತ್ಯಾನಂದನವಾಗಿ ಉಳಿಯಲಿ ಪ್ರೀತಿ
ಆಗುತ್ತಿರಲಿ ಸುವಿಚಾರಗಳ ಕ್ರಾಂತಿ
ಮತ್ತೆ-ಮತ್ತೆ ಬರುತಿರಲಿ ಸಂಕ್ರಾಂತಿ.