ಗೊಂಬೆ ತಿಂಡಿಗಳು
ಗೊಂಬೆ ತಿಂಡಿಗಳು
ಪುಟ್ಟ ಪುಟ್ಟ ಮಕ್ಕಳೇ
ಓಡಿ ಓಡಿ ಬನ್ನಿರೈ
ಸಿಹಿ ತಿಂಡಿ ತಿನಿಸುಗಳಾ
ಸವಿಯ ನೋಡ ಬನ್ನಿರೈ
ಬೇಸಿನ್ ಲಡ್ಡು ಬರ್ಫಿಗಳು
ರಸಗುಲ್ಲಾ ಮೋದಕಗಳು
ಬಿಸಿ ಬಿಸಿ ಜಿಲೇಬಿ ಗಳು
ಹಸಿಯ ಚಿಗುಲಿ ಉಂಡೆಗಳು
ಸಕ್ಕರೆಯಾ ಹೋಳಿಗೆಯನು
ಅಕ್ಕರೆಯಲಿ ನೀಡುವೆನು
ಚೊಕ್ಕ ವಾಗಿ ಕೈಯ್ಯ ನೀಡಿ
ಪಕ್ಕನೆ ರುಚಿ ಸವಿಯಿರಿ
ನವರಾತ್ರಿ ಬೊಂಬೆಗಳಾ
ನವವಿಧದಾ ಬಾಗಿನಗಳು
ಸವಿಸವಿಯ ಸಿಹಿತಿನಿಸುಗಳಾ
ಸವಿಯನೋಡ ಬನ್ನಿರೈ
