ಗೆಳತಿ
ಗೆಳತಿ
ನಳಿನಾಕ್ಷಿಯವರೇ ನಿಮ್ಮ ಪ್ರೀತಿಗೆ ನಾನೆಂದಿಗೂ ಅಭಾರಿ
ಇದೆಲ್ಲಾ ಆ ದೇವೆರಾ ಮಹಿಮೆ ಅಲ್ವೇನ್ರಿ
ನಾವು ಭೆಟ್ಟಿಯಾದ ಕೆಲೆವೇ ದಿನಗಳಲ್ಲಿ ನೀವು ಎನಗೆ ಆಪ್ತೆ
ಪ್ರೀತಿ ಹಂಚೋಣ ಎನ್ನುವಷ್ಟರಲ್ಲಿ ನೀವು ನಾಪತ್ತೆ
ಆದ್ರೂ ಒಂದೊಂದ್ತ್ರೂ ನಿಜ, ಈ ಕ್ಷಣಿಕ ಭೇಟಿಯಲ್ಲಿ
ಅಚ್ಚೋತ್ತಿದೆ ನಿಮ್ಮ ನೆನಪು ನನ್ನ ಮನದಾಳದಲ್ಲಿ
ನಿಮ್ಮಂತಹ ಪ್ರತಿಭಾವಂತೆಯ ಜೊತೆ ಕಳೆದ ಕ್ಷಣಗಳು
ಮರುಕಳಿಸಲಿ ಮತ್ತೆ ಮತ್ತೆ ಎಂದು ಹೇಳುತಿದೆ ಗಳಿಗೆಗಳು
ಇರಲಿ, ದೇವರು ನಿಮಗೆ ಆರೋಗ್ಯ ಐಶ್ವರ್ಯಾದಿಗಳನ್ನು ಕೊಟ್ಟು ಕಾಪಾಡಲಿ
ಎಲ್ಲೇ ಇರಿ, ಹೇಗೆ ಇರಿ, ಇದೊಂತೂ ಖರೆ ನಾನಿರುವೆ ಸದಾ ನಿಮ್ಮದೇ ನೆನೆಪಿನಲ್ಲಿ
ಇಂತಿ ನಿಮ್ಮ ಪ್ರೀತಿಯ ಗೆಳತಿ, ಬಯಸುತಾ ನಿಮ್ಮ ಒಳಿತು
ಅರ್ಪಿಸುವೆ ನಿಮಗೆ ಈ ಚಿಕ್ಕ ಕವನ ನಿಮ್ಮನೇ ಕುರಿತು ......
