ಎಲ್ಲವೂ ನೆಪ
ಎಲ್ಲವೂ ನೆಪ
ಕಾಡದೆ ಇರಲಾರದು
ನಿನ್ನ ನೆನಪುಗಳು
ಗತಿಸಿ ಹೋದ ಮೇಲೆ
ಎಲ್ಲವೂ ನೆಪಗಳು
ಹುಸಿ ಕೋಪವನು ತೋರಲು ನೀನು
ಮುನಿಯದೆ ನಾನು ಸುಮ್ಮನೆ ಇದ್ದೆನು
ಮರೆಯಲಿ ನಕ್ಕ ಕ್ಷಣವ ಕಂಡೆನು
ಪ್ರೇಮ ಕಲಾಪಕೆ ಹೊರಳಿದೆ ನೀನು
ಒಲವಿಗೆ ಎಲ್ಲೆ ಎಲ್ಲಿದೆ ನಲ್ಲೆ
ಕೋಪ ತಾಪವ ಮರೆಯುವೆಯೇನು?
ವ್ಯರ್ಥದ ಮಾತನು ಆಡುವುದೇಕೆ?
ಪ್ರೀತಿಯ ಬದುಕಿಗೆ ಭೀತಿಯು ಏಕೆ?
ದುಡುಕದೆ ಬಾಳಲಿ ಸೊಗವನು ಸವಿವ
ಅನುಕ್ಷಣ ಅನುದಿನ ಪ್ರೇಮದಿ ನಡೆವ
ನೀರಿನ ಗುಳ್ಳೆ ಬದುಕೆಂದು ಅರಿವ
ಎಲ್ಲವೂ ಕ್ಷಣಿಕ ಎಂಬುದ ಸಾರುವ

