ಏ ಚೆಲುವೇ
ಏ ಚೆಲುವೇ
ಕಾನನ ಅಂದವ ಸವಿಯುವ ಮಯೂರಿ
ನೋಡಲು ಇವಳು ಸುರ ಸುಂದರಿ
ಮಯೂರಿ ನಾಟ್ಯಕ್ಕೆ ಮನಸೋತ ಯುವ ರಾಜ
ಅವಳ ಅಂದಕ್ಕೆ ಜಾರಿದ ವ್ಯಾಘ್ರರಾಜ
ಕಣ್ಣುಗಳೆರಡು ಅರಳಲು ಇವಳ ನೋಡಿ
ಮಾಡಿದಳು ಇವಳು ಹೆಬ್ಬುಲಿಯ ಮೋಡಿ
ನನ್ನ ನಾನೇ ಮರೆತಂತೆ ಅವನ ಮೌನ
ಆ ನೃತ್ಯಗಾರ್ತಿಯ ಮೇಲೆ ಹರಿಸಿದ ಸಂಪೂರ್ಣ ಗಮನ
ಹುಲಿಯ ಮನದಲ್ಲಿ ಪ್ರೀತಿಯು ಚಿಗುರಲು
ಹೊಸ ಹೊಸ ಭಾವ ಮನದಲ್ಲಿ ಅರಳಲು
ಅವಳ ಚೆಲುವಿಗೆ ಸೋಲದವರಾರು?
ಅವಳ ಸೌಂದರ್ಯಕ್ಕೆ ಮರುಳಾಗದವರು?

