ಭರವಸೆ
ಭರವಸೆ
ಉತ್ತಮವಾಗಿ ಬರೆದರೆ ಪರೀಕ್ಷೆ
ಹುಸಿಯಾಗದು ನಿಮ್ಮ ನಿರೀಕ್ಷೆ
ಸರಿಯಾದ ಗುರಿತಲುಪುವ ಆಕಾಂಕ್ಷೆ
ಎಲ್ಲವ ನಿರ್ಧರಿಸುವುದು ಈ ಅಗ್ನಿಪರೀಕ್ಷೆ
ಉತ್ತಮ ಅಂಕ ಪಡೆದರೆ ಖುಷಿಪಡಿ
ಉತ್ತಮ ಅಂಕ ಪಡೆಯದಿದ್ದರೆ ಚಿಂತೆಬಿಡಿ
ಉತ್ತಮ ಅಂಕ ಪಡೆಯುವೆ ಎಂಬ ಭರವಸೆ
ಅದು ಎಂದೆಂದೂ ತಂದು ಕೊಡದು ನಿರಾಸೆ
ಇಂದು ನೀವು ಮಾಡಿದ ಸಾಧನ
ರೂಪಿಸುವುದು ಉತ್ತಮ ಜೀವನ
ಸಾಧನಕ್ಕೆ ಇದೆ ಎಂದೂ ಸನ್ಮಾನ
ಹೆಚ್ಚಿಸುವುದು ಇದು ಆತ್ಮ ಅಭಿಮಾನ
ಇದು ಎಂದೆಂದೂ ನೆನಪಿಸುವ ಪುಟ
ಇದು ನಿಮ್ಮ ಪ್ರಮುಖ ಘಟ್ಟ
ಇಷ್ಟು ದಿವಸ ಕಷ್ಟಪಟ್ಟ ನಿಮಗೆ
ಸಿಗುವುದು ಗೆಲುವಿನ ಪಟ್ಟ ಕೊನೆಗೆ
