STORYMIRROR

Vijaya Bharathi.A.S.

Abstract Inspirational Others

4  

Vijaya Bharathi.A.S.

Abstract Inspirational Others

ಭಾರತಭೂಮಿ

ಭಾರತಭೂಮಿ

1 min
360

ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.


ಭೂಮಂಡಲದ ಮುಕುಟ ಮಣಿ 

ಈ ನನ್ನ ಭಾರತ ಭೂಮಿ

ದೇವತೆಗಳ ಪರಮ ಪ್ರೀತಿಯ ಭುವಿ

ಈ ನನ್ನ ಜನ್ಮ ಭೂಮಿ 

ದಿವಿ ಭುವಿಗಳಾ ಮಾರ್ಗ ಸೇತು

ಈ ನನ್ನ ಮಾತೃ ಭೂಮಿ


ಸುರಗಂಗೆ ಇಳಿದು ಬಂದ ಧರೆ

ಈ ನನ್ನ ಭಾರತ ಭೂಮಿ

ಭವ ಸಾಗರ ದಾಟಿಸುವ ಮುಕ್ತಿ ಸ್ಥಳ

ಈ ನನ್ನ ಜನ್ಮ ಭೂಮಿ

ಸುಕೃತಿ ಚೇತನರ ಪ್ರಸವ ಭೂಮಿ

ಈ ನನ್ನ ಮಾತೃ ಭೂಮಿ 


ಬ್ರಹ್ಮ ಜ್ಞಾನಿಗಳ ತಪೋಭೂಮಿ

ಈ ನನ್ನ ಭಾರತ ಭೂಮಿ

ಭಗವದವತರಣಿಕೆಗಳ ಪಾವನ ಧರಣಿ

ಈ ನನ್ನ ಜನ್ಮ ಭೂಮಿ

ಹರಿಹರರ  ಆವಾಸದ ದೇವ ಭೂಮಿ

ಈ ನನ್ನ ಮಾತೃ ಭೂಮಿ


ಹಿಮಗಿರಿ ಮುಕುಟಧಾರಿಣಿ ಸಮನೋಹರಿ

ಈ ನನ್ನ ಭಾರತ ಭೂಮಿ

ಸಂತಮಹಾಂತರು ಜನಿಸಿದ ಧರ್ಮ ಭೂಮಿ

ಈ ನನ್ನ ಜನ್ಮ ಭೂಮಿ

ದೇಶಭಕ್ತ ಹುತಾತ್ಮರ ವೀರ ಭೂಮಿ 

ಈ ನನ್ನ ಮಾತೃ ಭೂಮಿ 


ವಿಜ್ಞಾನ ತಂತ್ರಜ್ಞಾನದ ವೈಜ್ಞಾನಿಕ ತಾಣ

ಈ ನನ್ನ ಭಾರತ ಭೂಮಿ 

ವಿಶ್ವ ಭೂಪಟ ವಿರಾಜಿತೆ ವಿಜೇತೆ

ಈ ನನ್ನ ಜನ್ಮ ಭೂಮಿ 

ನನಗೆ ಜನ್ಮ ನೀಡಿದ ನನ್ನ ಹೆಮ್ಮೆಯ ದೇಶ

ಈ ನನ್ನ ಮಾತೃ ಭೂಮಿ 


ವಂದೇಮಾತರಂ 



Rate this content
Log in

Similar kannada poem from Abstract