ಬದುಕು ನೀರ ಮೇಲಣ ಗುಳ್ಳೆಯಂತೆ...
ಬದುಕು ನೀರ ಮೇಲಣ ಗುಳ್ಳೆಯಂತೆ...
ಸುಂದರ ಸ್ವಪ್ನದಲಿ ವಿಹರಿಸಿದವನಿಗೆ
ಬದುಕು ನೀರ ಮೇಲಣ ಗುಳ್ಳೆಯಂತೆ
ಎಂದು ಭಾಸವಾಯಿತು.
ಎಷ್ಟೇ ಗೆದ್ದರೂ, ಹಣ- ಹೆಸರುಗಳಿಸಿದರೂ,
ಕ್ಷಣ ಮಾತ್ರದಲಿ ಶೂನ್ಯಕ್ಕಿಳಿಯಬಹುದೆಂಬ
ಗುಟ್ಟೊಂದು ತಿಳಿಯಿತು.
ಸೋತವನು ಗೆಲ್ಲಬಹುದು
ಗೆದ್ದವನು ಸೋಲಬಹುದು
ಸೋತೂ ಗೆಲ್ಲಬಹುದು
ಗೆದ್ದು ಸೋಲಬಹುದು
ಬದುಕು ಕಾಲಚಕ್ರಕ್ಕೆ ಸಿಕ್ಕಂತೆ
ಬದಲಾಗಬಹುದೆಂದು ಅರಿವಾಯಿತು.
ಬದುಕು ಶಾಶ್ವತವಲ್ಲ
ಅದರ ಕೀಲಿ ಕೈ ನಮ್ಮಲ್ಲಿಲ್ಲ
ಬೇಕೆಂದರೂ, ಬೇಡೆಂದರೂ
ಎಷ್ಟೇ ಕಷ್ಟ-ಕಾರ್ಪಣ್ಯ ಬಂದೊದಗಿದರೂ
ಬದುಕನ್ನು ಸವೆಸಲೇಬೇಕೆಂಬ
ಕಹಿಸತ್ಯವೊಂದು ಗೊತ್ತಾಯಿತು.
