STORYMIRROR

AMMU RATHAN SHETY

Classics Inspirational Others

4  

AMMU RATHAN SHETY

Classics Inspirational Others

ಅಪೇಕ್ಷೆ

ಅಪೇಕ್ಷೆ

1 min
332

ಅನ್ವೇಷಣೆಯಲ್ಲಿ ವರನಿಗೆ ಚೆಂದದ ವಧುವಿನ ಅಪೇಕ್ಷೆ 

ವರನ ಹೆತ್ತವರಿಗೆ ಕಾರ್ಯ ನಿಪುಣತೆಯ ಪರೀಕ್ಷೆ

ಹೆಣ್ಣೆಂದರೆ ಯಾರದೋ ಇಚ್ಛೆಯಂತೆ ಇರಬೇಕೆ

ಅವಳಿಗಿರಬರಬಾರದೇ ಬದುಕಿನ ಬಗೆಗೆ ನಿರೀಕ್ಷೆ


ಹೆತ್ತವರ ಮಾರ್ಗದರ್ಶನದಂತೆ ಬೆಳೆದಳು

ಮತ್ತರದೋ ಅಣತಿಯಂತೆ ಬಾಲ್ಯ ಕಳೆದಳು

ಹರೆಯದಿ ಭಯದಲ್ಲೇ ಶಿಕ್ಷಣ ಪೂರೈಸಿದಳು

ಅವಳ ಅಪೇಕ್ಷೆಗಳೆನೆಂದು ಕೇಳುವ ಗೋಜಿಗೆ ಹೋದವರಾರು


ಅವನೋ ತಾಳಿಗಷ್ಟೇ ವಾರಸುದಾರನು

ಆಜ್ಞೆ ಮಾಡುವಷ್ಟು ಅಧಿಕಾರ ಕೊಟ್ಟವರು ಯಾರು

ಮನೆಯವರೆಲ್ಲರೂ ತಾತ್ಸರ ತೋರಿದರೂ

ಎಲ್ಲರ ಅನುಸರಿಸಿಕೊಂಡು ಹೋಗುವ ಮಡದಿಯಳು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics