STORYMIRROR

Sugamma Patil

Classics Inspirational Others

4  

Sugamma Patil

Classics Inspirational Others

ಅಂತರಾಳ

ಅಂತರಾಳ

1 min
338


ಅವಳ ನಗು ಮೊಗವ ನೋಡಿ ಖುಷಿಪಟ್ಟವರಿಗಿಂತ ಅಸೂಯೆ ಪಟ್ಟವರೇ ಜಾಸ್ತಿ 

ಅವಳ ನಗು ಮೊಗದ ಹಿಂದೆ ಅಡಗಿರುವ ನೋವು ಯಾರಿಗೂ ಕಾಣಲೇ ಇಲ್ಲಾ


ಅವಳ ಕಣ್ಣೀರು ಕಂಡು ಮರುಗಿದವರಿಗಿಂತ

ಆಡಿಕೊಂಡು ನಕ್ಕವರೇ ಜಾಸ್ತಿ

ಅವಳ ಕೆದರಿದ ಗಾಯಕ್ಕೆ ಮುಲಾಮು ಹಚ್ಚುವರು ಬರಲೇ ಇಲ್ಲಾ 


ಅವಳ ಮುಗ್ಧತೆಯ ಮನಸ್ಸಿಗೆ ನಿಸ್ವಾರ್ಥ ಪ್ರೀತಿ ಕೊಟ್ಟವರಿಗಿಂತ ಮೋಸ ಮಾಡಿದವರೇ ಜಾಸ್ತಿ

ಅವಳ ನಂಬಿಕೆಗೆ ಕೊಳ್ಳಿಯಿಟ್ಟು ತಪ್ಪು ಮಾಡಿದೆವು ಎಂದು ಅವರು ಮರುಗಲೇ ಇಲ್ಲಾ 


ಅವಳು ಕಷ್ಟವೆಂದು ಬಂದವರಿಗೆ ಸಹಾಯ ಹಸ್ತ ನೀಡಿದಾಗ ಹೊಗಳಿದವರೇ ಜಾಸ್ತಿ 

ಅವಳ ಅಸಾಯಕ ಸ್ಥಿತಿಯಲ್ಲಿ ಸಹಕರಿಸುವ ಸಂಯಮ ಯಾರಿಗೂ ಹುಟ್ಟಲೇ ಇಲ್ಲಾ


ಅವಳು ಎಲ್ಲವನ್ನು ಸಹಿಸುವ ಸಹನಾಮಯಿ

ತ್ಯಾಗ ಗುಣದವಳು ಆದರೂ

ಅವಳ ಅಂತರಾಳದ ವೇದನೆಯನ್ನು ಅರಿಯದ ಜಾಣ ಕುರುಡರೊಂದಿಗೆ ತಬ್ಬಲಿಯಾಗಿ ಬಾಳುತಿಹಳು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics