STORYMIRROR

Gireesh pm Giree

Inspirational

2  

Gireesh pm Giree

Inspirational

ಅಕ್ಕರೆ

ಅಕ್ಕರೆ

1 min
130

ಅಮ್ಮ ನೀನು ನಕ್ಕರೆ ಬಾಯಿಗೆ ಸಕ್ಕರೆ 

ಅಮ್ಮ ನಾನು ಅತ್ತರೆ ನಿನ್ನ ಕೈಗಳ ಅಕ್ಕರೆ 

ನಾ ಭಯಗೊಂಡರು ನಿನ್ನ ಸೆರಗ ಆಸರೆ 

ನಾ ಕನಸುಗಳು ನಿನ್ನ ಮಡಿಲ ಆಸರೆ


ಗುಲಾಬಿ ಎಷ್ಟೇ ಮುಳ್ಳಿದ್ದರೂ ನಗುವ ಹಾಗೆ 

ನಿನಗೆ ಎಷ್ಟೇ ಕಷ್ಟವಿದ್ದರೂ ನಗುವ ನಗೆ

ಹರಿವ ಗಂಗಾಕಾವೇರಿ ಯಮುನಾ ತುಂಗೆ ಮಂಗಳದಲ್ಲಿ

ಕಂಡೆ ನಿನ್ನ ಮೊಗದ ಅಂಗಳದಲ್ಲಿ


ಗುರಿಯನ್ನು ಹೇಳಿಕೊಟ್ಟ ಮೊದಲ ಗುರು 

ಜೀವನದಲ್ಲಿ ಕನಸನ್ನು ಚಿಗುರಿಸಿದ ದೇವರು 

ನೀನೆ ನನಗೆ ಉಸಿರಿಗೆ ಉಸಿರು ಇರಲಿ ನಿನ್ನ ಮೊಗ ಎಂದು ಹಸಿರು


ನಿನ್ನಿಂದ ಜಗವೆಂಬ ಜ್ಯೋತಿಯ ದರ್ಶನ 

ನಿನ್ನಿಂದ ಅಮೂಲ್ಯ ಜೀವನ ಆರಿಲ್ಲ ನೀ ಕೊಟ್ಟ

ಸಿಹಿ ಚುಂಬನ ಮರೆತಿಲ್ಲ ಹೇಳಿಕೊಟ್ಟ ಹನಿಗವನ


ಕೈ ತುತ್ತು ಕೊಟ್ಟು ಮುತ್ತು ಕೊಡುವ ಮಾತೆ

ಪದಗಳೇ ಸಾಲದು ನಿನ್ನ ಬಗ್ಗೆ ಬರೆಯಲು ಕವಿತೆ 

ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವತೆ ನೀ ಮಮತೆ ಎಂಬ ಕಾಂತಿಯುಳ್ಳ ಹಣತೆ


ನಾ ಸೋತರೆ ಗೆಲುವಿನ ಸೂತ್ರ ತಿಳಿಸಿದೆ

ನಾ ಅತ್ತರೆ ನಗುವಿನ ತಂತ್ರದಿಂದ ನಗಿಸಿದೆ

ಭುವಿಗೆ ಚಂದ್ರಮನ ಬೆಳಕೇ ಸುಂದರ 

ಮಾತೇ ನನಗೆ ನಿನ್ನ ಮಾತೇ ಇಂಚರ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational