STORYMIRROR

JAISHREE HALLUR

Classics Inspirational Others

4  

JAISHREE HALLUR

Classics Inspirational Others

ಪರಿಶ್ರಮದ ಫಲ

ಪರಿಶ್ರಮದ ಫಲ

1 min
332


    ಈ ಪರಿಶ್ರಮ ಅನ್ನೋದು ನಮ್ಮೊಳಗೇ ಇದ್ದು ಕಾರ್ಯರೂಪದಲ್ಲಿ ಹೊರಬರುವಂತದ್ದು. ನಾನಿಲ್ಲಿ ನಿಮ್ಮೆದುರಿಗೆ ನಿಂತು ಈ ಮಾತು ಹೇಳಬೇಕಾದರೆ ನಾನು ಲಕ್ಕೀ ಅಂತ ಹೇಳಲ್ಲ. ಅದು ನನ್ನ ಪರಿಶ್ರಮ. ನನ್ನ ತಂದೆತಾಯಿಯ ಪರಿಶ್ರಮ. ನಾನು ಓದಲು ಸಹಾಯ ಮಾಡಿದ ಗುರುಗಳ ಪರಿಶ್ರಮ. ನನ್ನ ಹಿಂದೆ ಮುಂದೆ ಅದೆಷ್ಟು ಜನ ಪರಿಶ್ರಮ ಪಟ್ಟಿದ್ದಾರೋ ಅವರೆಲ್ಲರ ಪರಿಶ್ರಮದಿಂದ ನಾನು ಒಬ್ಬ ದಕ್ಷ ನೌಕಾದಳದ ಅಧಿಕಾರಿಯಾಗಿ, ರಕ್ಷಣಾ ಇಲಾಖೆಯಲ್ಲಿ ದೇಶಸೇವೆ ಸಲ್ಲಿಸುವ ಅವಕಾಶ ದೊರೆತದ್ದು. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು.  

     ಮಿತ್ತರೆ, ಒಂದನ್ನು ಸಾಧಿಸಬೇಕಾದರೆ ಮನದಲ್ಲಿ ಛಲ ಇರಬೇಕು. ಗುರಿ ಇರಬೇಕು. ಪರಿಶ್ರಮ ಪಡಬೇಕು. ಸುಮ್ಮನೆ ಸಿಗುವುದಲ್ಲ ಯಶಸ್ಸು. ನನ್ನ ಚಿಕ್ಕ ವಯಸ್ಸಿನಿಂದಲೂ ಅತ್ಯಂತ ಕಷ್ಟದಾಯಕ ಪರಿಸ್ತಿತಿಯಲ್ಲಿ ಓದನ್ನು ಮುಗಿಸಿದವಳು ನಾನು. ಬದುಕು ಪಾಠ ಕಲಿಸುತ್ತದೆ. ಜೀವನದ ಉತ್ತುಂಗ ಇಷ್ಟೇ ಅಲ್ಲ. ಮುಂದಕ್ಕೂ ಇದೆ ಎಂಬ ಭಾವ ಇರಬೇಕು. ಛಲ ಇರಬೇಕು. ನಾನು ಏನಾಗಬೇಕೆಂಬ ಗುರಿಯಿರಬೇಕು. ಹಂಬಲ ಇರಬೇಕು. ಅದು ಬದುಕಿನ ಸ್ಪೂರ್ತಿಯಾಗಬೇಕು. ಇತರರಿಗೆ ಮಾರ್ಗದರ್ಶಿಯಾಗಬೇಕು. ಸಂತೋಷ ಹಂಚಿಕೊಳ್ಳಬೇಕು. ದುಃಖದಲ್ಲಿ ಭಾಗಿಯಾಗಬೇಕು. ಸುಖದಲ್ಲಿ ತಣಿಯಬಾರದು. ದುಃಖದಲ್ಲಿ ಧಣಿಯಬಾರದು. 

ಸ್ವಾಮಿ ವಿವೇಕಾನಂದರು ತಮ್ಮ ಕೇವಲ ಮೂವತ್ತು ವರ್ಷದ ಆಯುಷ್ಯದಲ್ಲಿ ಏನೆಲ್ಲಾ ಸಾಧಿಸಿದರು. ಅವರು ನಿದ್ದೆನೇ ಮಾಡುತ್ತಿರಲಿಲ್ಲ. ಸದಾ ದೇಶದ ಬಗ್ಗೆ ಚಿಂತನೆ ಮಾಡುತ್ತಿದ್ದರು. ಸದಾ ನಾನಿಂದು ಈ ಗಳಿಗೆ ಜನರಿಗಾಗಿ ಏನು ಮಾಡಬಲ್ಲೆ ಎಂಬ ಪ್ರಶ್ನೆಗೆ ಅವರೇ ಉತ್ತರ ಹುಡುಕಿಕೊಳ್ಳುತ್ತಿದರು. ಅಂತಹ ಮಹಾನುಭಾವರು ಹುಟ್ಟಿದ ನಮ್ಮ ಭಾರತ ದೇಶದ ನಿವಾಸಿಗಳೆ, ನಾವೂ ನೀವೂ ಏನಾದರೂ ಸಾಧಿಸೋಣ. ಕೊನೆಪಕ್ಷ ಬಡವರ ಪಾಲಿಗೆ ಒಂದು ಹೊತ್ತಿನ ಊಟ ಕೊಟ್ಟಾದರೂ... ಯೋಚಿಸಿನೋಡಿ....ಖಂಡಿತ ಸಾದ್ಯ...

ಶುಭವಾಗಲಿ......


(ನಿನ್ನೆ, ನನ್ನೆದುರಿನ ತಟ್ಟೆಯಲ್ಲಿ ಅರ್ಧ ಊಟ ಬಿಟ್ಟು ಎದ್ದು ಹೋದ ಮಹಾನುಭಾವನೊಬ್ಬ. ಅಷ್ಟರಲ್ಲಿ, ಅಲ್ಲಿಗೆ, ಮತ್ತೊಬ್ಬ ಹಸಿವೆಯಿಂದ ಬಳಲುತ್ತ ಬಂದು ಅದೇ ತಟ್ಟೆಗೆ ಕೈ ಹಾಕಿದಾಗ ನಾನು ಮೂಕವಿಸ್ಮಿತಳಾದೆ. ಪಾಪ! ಹಸಿವು, ಬಡತನ, ಎಂತಹ ಪರಿಸ್ಥಿತಿ..ಅಂತ ಅನಿಸ್ತು. ಅಷ್ಟರಲ್ಲಿ, ಹೋಟೇಲಿನ ಮಾಲೀಕರು ಬಂದು ಅವನನ್ನು ಅಲ್ಲಿಂದ ಎಬ್ಬಿಸಿ, ಅದೇ ತಟ್ಟೆಗೆ ಇನ್ನೊಂದಿಷ್ಟು ಅನ್ನ ಬಡಿಸಿ, ಆತನನ್ನು ಹೊರಗೆ ಕುಳ್ಳಿರಿಸಿ ಊಟ ಮಾಡಲು ಹೇಳಿದರು. ನಿಜಕ್ಕೂ ನನಗಾದ ಆನಂದ, ಖುಷಿ ಅಷ್ಟಿಟ್ಟಲ್ಲ. ಅನ್ನದಾತ ಸುಖೀಭವ ಎಂದೆ ಮನದಲ್ಲಿ...ಇದು ನಿಜಕ್ಕೂ ಪುಣ್ಯದ ಕೆಲಸವೇ ಹೌದು. )



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Classics