ಪ್ರೀತಿಸಿ ನೋಡು
ಪ್ರೀತಿಸಿ ನೋಡು
ತಮ್ಮ ಮಗಳು ತನುಜಾಳಿಗೆ ಒಳ್ಳೆಯ ಸಂಬಂಧವನ್ನು ನೋಡಿ, ಎಂಗೇಜ್ಮೆಂಟ್ ಗೆ
ಏರ್ಪಾಡು ಮಾಡಿದ್ದರು ಅನಂತನ್.
ಹುಡುಗ ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಮಗಳಿಗೆ ಅನುಗುಣವಾಗಿದ್ದಾನೆಂದು ಅನಂತನ್ ಹೆಮ್ಮೆಯಿಂದ ಬೀಗಿದ್ದರು. ತಮ್ಮ ನೆಂಟರಿಷ್ಟರು ಸ್ನೇಹಿತರನ್ನು ಎಂಗೇಜ್ಮೆಂಟ್ ಗೆ ಆಹ್ವಾನಿಸಿದ್ದರು.
ಎಂಗೇಜ್ಮೆಂಟ್ ಹಿಂದಿನ ರಾತ್ರಿ ತನುಜಾ ಇದ್ದಕ್ಕಿದ್ದಂತೆ ಮನೆಯಲ್ಲಿ ಕಾಣೆಯಾದಾಗ, ಎಲ್ಲರಿಗೂ ಆತಂಕ ವಾಯಿತು. ಅನಂತನ್ ತಲೆಯ ಮೇಲೆ ಕೈ
ಹೊತ್ತು ಕುಳಿತರು. ಮಗಳನ್ನು ಹುಡುಕಿಸುವ ಎಲ್ಲಾ ಪ್ರಯತ್ನ ಗಳನ್ನು ಮಾಡಿದರು. ಆದರೆ ಅವರು ಪ್ರಯತ್ನ ಗಳೆಲ್ಲವೂ ವ್ಯರ್ಥ ವಾದಾಗ, ಅವರು ಅವಮಾನದಿಂದ ಕುಗ್ಗಿ ಹೋದರು.
ಅಂದು ಮನೆಬಿಟ್ಟು ಓಡಿ ಹೋದ ತನುಜಾ ತಾನು ಪ್ರೀತಿಸಿದ ಆಟೋ ಡ್ರೈವರ್ ಸಂತೋಷ್ ಜೊತೆ ಮದುವೆ ಮಾಡಿ ಕೊಂಡ ವಿಷಯ ತಿಳಿದಾಗ, ಅನಂತನ್ ತನ್ನ ಮಗಳು ತನ್ನ ಪಾಲಿಗೆ ಇನ್ನಿಲ್ಲ ವೆಂದು ತೀರ್ಮಾನ ಮಾಡಿಕೊಂಡರು.
ಎರಡು ವರ್ಷಗಳ ನಂತರ ಒಂದು ದಿನ ತನುಜಾ
ಕಂಕುಳಿನಲ್ಲಿ ಮಗುವನ್ನು ಇಟ್ಟು ಕೊಂಡು ಗೋಳಾಡುತ್ತಾ ತಂದೆಯ ಮನೆಗೆ ಆಶ್ರಯ ಕೋರಿ ಬಂದಾಗ, ಮಗಳ ಪರಿಸ್ಥಿತಿಯನ್ನು ನೋಡಿ ಅನಂತನ್ ಮತ್ತು ಪದ್ಮಾವತಿ ಗೆ ಕರುಳು ಚುರ್ ಅಂದಿತು.
ಅಂದು ತಮಗೆ ಅವಮಾನ ಮಾಡಿ ,ತಾವು ನೋಡಿದ ಒಳ್ಳೆಯ ಹುಡುಗ ನ ಜೊತೆ ಮದುವೆ ಮಾಡಿಕೊಂಡು ಸುಖವಾಗಿ ಇರದೇ, ಪ್ರೀತಿ ಪ್ರೇಮದ ಹುಚ್ಚಾಟದಲ್ಲಿ ಗೊತ್ತು ಗುರಿಯಿಲ್ಲದವನನ್ನು ಮದುವೆ ಮಾಡಿ ಕೊಂಡು , ನಾಲ್ಕು ದಿನ ಓಡಾಡಿ, ನಂತರ ಅವನು ಕೈಕೊಟ್ಟಾಗ, ಈಗ ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಬಂದರೆ ತಂದೆತಾಯಿಯ ಪರಿಸ್ಥಿತಿ ಹೇಗಾಗಬೇಡ?
ತಾವು ಬದುಕಿದ್ದೂ ತಮ್ಮ ಮಗಳು ಅನಾಥಳಂತೆ ಇರಬಾರದೆಂದು, ಅವಳ ಹಾಗೂ ಅವಳ ಮಗನಿಗೆ ಜೀವನಕ್ಕೆ ದಾರಿ ಮಾಡಿಕೊಟ್ಟರು ಅನಂತನ್.ತಮ್ಮ ಇಳಿವಯಸ್ಸಿನಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಅವರಿಬ್ಬರ ಜವಾಬ್ದಾರಿಯನ್ನು
ಇದೆಂಥಾ ಪ್ರೀತಿ? ಪ್ರೀತಿ ಕುರುಡೋ?ಪ್ರೀತಿಸುವವರು ಕುರುಡರೋ?,
