STORYMIRROR

Gireesh pm Giree

Abstract Drama Action

3  

Gireesh pm Giree

Abstract Drama Action

ಪರೀಕ್ಷೆ

ಪರೀಕ್ಷೆ

1 min
173


ಪರೀಕ್ಷೆಯೆಂದರೆ ನನಗೊಂತರ ಭಯ. ಓದಿದ್ದು ಮರೆತರೆ ಎಂದು, ಓದದಿದ್ದರೆ ಅಲ್ಲಿ ಬರೆಯುವುದು ಏನೆಂದು. ಹಾಗೆ ನಾನು ರಾತ್ರೆ ಮರುದಿನ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೆ. ಸಾರ್ ಕೊಟ್ಟ ಪ್ರಶ್ನೋತ್ತರವನ್ನು ಸರಿಯಾಗಿ ಓದಿದ್ದೇ ಓದಿದ್ದು. ಪರೀಕ್ಷೆ ಏನಾದ್ರೂ ನಾಳೆ ಇರುತ್ತಿದ್ದರೆ ಪಕ್ಕ ಫುಲ್ ಮಾರ್ಕ್. ಆದರೆ ನಡೆದದ್ದೇ ಬೇರೆ ನಿದ್ದೆಮಂಪರಿಗೆ ಕಣ್ಣು ಕೂರಲಾರಂಭಿಸಿತ್ತು ಇನ್ನೇನು ಮಲಗುವ ನಾಳೆ ಬೆಳಿಗ್ಗೆ ಎದ್ದು ಸ್ವಲ್ಪ ಓದುವ ಎಂದು ಟೈಮ್ ಟೇಬಲ್ ಬುಕ್'ನಲ್ಲಿ ಇದೆಯಾ ಇಲ್ಲವೋ ಎಂದು ಪರೀಕ್ಷೆ ಮಾಡುವಾಗ ನನಗೊಂದು ಅಲ್ಲೇ ಕಾದಿತ್ತು ಪರೀಕ್ಷೆ. ಆಕಳಿಸುತ್ತಿದ್ದ ಬಾಯಿ ತನ್ನಷ್ಟಕ್ಕೆ ತಾನೇ ಮುಚ್ಚಿತು ಕಣ್ಣು ಒಮ್ಮೆಗೆ ವಿಂಚಂತೆ ಹೊಳೆಯಿತು . ಒಮ್ಮೆಲೆ ತಣ್ಣಗಿದ್ದ ದೇಹ ಬಿಸಿಯಾಯಿತು. ಅಷ್ಟಕ್ಕೂ ಏನಾಯ್ತು ಅಂದ್ರೆ ನಾಳೆಯ ಪರೀಕ್ಷೆಯ ವಿಷಯ ನಾನು ಓದಿದ ವಿಷಯ ಬೇರೆ ಬೇರೆಯಾಗಿತ್ತು. ಅಯ್ಯೋ ದೇವರೇ ತಂದುಕೊಂಡೆ ನನಗೆ ನಾನೇ ತೊಂದರೆ ಎನ್ನುತ್ತ ವ್ಯಥೆಪಟ್ಟೆ . ಆದದ್ದಾಗಲಿ ತಪ್ಪು ನನ್ನದೇ ಅದನ್ನು ನೆನೆದು ಫಲವಿಲ್ಲ. ನಾಳಿನ ಪರೀಕ್ಷೆ ವಿಷಯ ಓದುವ ಎನ್ನುತ್ತ ಓದಲು ಶುರುಮಾಡಿದೆ.

  ಈಗಲೂ ಆ ಘಟನೆ ನೆನೆದರೆ ನಗು ಬರುತ್ತದೆ. ಅಂದು ರಾತ್ರಿ ವೇಳಾಪಟ್ಟಿ ನೋಡದಿದ್ದರೆ ನಾಳಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಆಗುತ್ತಿರಲಿಲ್ಲ.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract