murali nath

Inspirational Others

3  

murali nath

Inspirational Others

"ಒಂದು ಸೂಜಿ ಯ ಕಥೆ,"

"ಒಂದು ಸೂಜಿ ಯ ಕಥೆ,"

1 min
105



ಒಬ್ಬ ತನ್ನ ವಯಸ್ಸಾದ ತಾಯಿಗೆ ತಾನೇ ಬಟ್ಟೆ ಹೊಲಿದು ಕೊಡಬೇಕೆಂದು ಇಚ್ಛೆ ಆಯ್ತು. ಸಾಮಾನ್ಯ ಸೂಜಿ ದಾರದಿಂದ ಹೊಲಿಯಲುಕುಳಿತ ಮಧ್ಯ ರಾತ್ರಿ ಆಯ್ತು ಹಾಗೆ ನಿದ್ದೆ ಬಂತು ಮಲಗಿಬಿಟ್ಟೆ. ಅವನ ಕನಸಲ್ಲಿ ಇವನನ್ನ ಕಾಡುಜನ ಎಳೆದುಕೊಂಡು ಹೋಗಿ ಬಲಿ ಕೊಡಲುಅವರ ರಾಜನ ಬಳಿ ನಿಲ್ಲಿಸಿದ್ದಾರೆ.ರಾಜ ಅವನ ಭಾಷೆಯಲ್ಲಿ ಹೇಳಿದ ನಿಮ್ಮ ಅಮ್ಮನಿಗೆ ಬಟ್ಟೆ ಹೊಲಿಯುತ್ತಿರುವ ವಿಷಯ ನಮಗೆ ಗೊತ್ತು. ಆದರೆ ನೀನು ನಿಮ್ಮ ತಾಯಿಗೆ ಮಾತ್ರ ಹೊಲಿದರೆಸಾಲದು ನಮಗೆಲ್ಲಾ ಹೊಲಿದು ಕೊಡಬೇಕು.ನೀನು ಬರಿಯ ಕಯ್ಯಲ್ಲಿ ಹೊಲಿದರೆ ಬಹಳ ಸಮಯ ಹಿಡಿಯುತ್ತೆ. ಒಂದು ತಿಂಗಳಲ್ಲಿ ನಮ್ಮ ಹಬ್ಬ ಬರುವುದಿದೆ ಅಷ್ಟರಲ್ಲಿ ಇಲ್ಲಿರುವ ಎಲ್ಲರಿಗೂ ಹೊಸ ಬಟ್ಟೆ ತಯಾರಾಗರಾಬೇಕು ಇಲ್ಲದಿದ್ದರೆ ನಿನ್ನ ತಲೆ ಕಡಿಯುತ್ತೇವೆ ಎಂದು ಹೆದರಿಸಿದ . ಇವನ ಸುತ್ತ ಈಟಿ ಹಿಡಿದು ಕುಣಿಯುತ್ತಿರುವ ಕಾಡುಜನ ಇವನ ಕಣ್ಣಿನ ಹತ್ತಿರ

ಚೂಪಾದ ಭಾಗವನ್ನು ತರುತ್ತಿದ್ದಾಗ ತಕ್ಷಣ ಅವನಿಗೆ ಒಂದು ವಿಚಾರ ಹೊಳೆಯಿತು. ಈಟಿ ಯಂತೆಯೆ ಸೂಜಿ ಇದ್ದರೆ ಅದಕ್ಕೆ ಎರಡು ಕಡೆ ದಾರ ಹಾಕಿ ಬೇಗನೆ ಹೊಲಿಯ ಬಹುದೆಂದು. ನಿದ್ದೆಯಿಂದ ಎದ್ದೊಡನೆ ಮರೆಯದೆ ಅದರಂತೆಯೇ ಸೂಜಿ ತಯಾರು ಮಾಡಿದ ಅದಕ್ಕೆ ತಕ್ಕ ಯಂತ್ರವನ್ನು ಮಾತ್ತೊಬ್ಬನಿಂದ ಮಾಡಿಸಿದ. ಇಂದಿಗೂ ಆ ಸೂಜಿಯ ವಿನ್ಯಾಸವನ್ನು ನೂರು ವರ್ಷಗಳು ದಾಟಿದರೂ ಯಾರು ಬದಲಾಯಿಸಲು ಸಾಧ್ಯವಾಗಿಲ್ಲ ಎಂದರೆ ಆಶ್ಚರ್ಯ ವಲ್ಲವೇ. ಆ ವಿಜ್ಞಾನಿಯ ಹೆಸರು " ಹೊ".


Rate this content
Log in

Similar kannada story from Inspirational